ಯೋಹಾನನು 2:8

ಆತನು ಅವರಿಗೆ--ಈಗ ಇದನ್ನು ತೋಡಿಕೊಂಡು ಹೋಗಿ ಔತಣದ ಪಾರುಪತ್ಯಗಾರನಿಗೆ ಕೊಡಿರಿ ಎಂದು ಹೇಳಲು ಅವರು ತಕ್ಕೊಂಡು ಹೋಗಿ ಕೊಟ್ಟರು.

ಸಂದರ್ಭದೊಂದಿಗೆ ಓದಿ · ಯೋಹಾನನು 2

6ಯೆಹೂದ್ಯರ ಶುದ್ಧೀ ಕರಣದ ಪ್ರಕಾರ ಅಲ್ಲಿ ಪ್ರತಿಯೊಂದು ಎರಡು ಇಲ್ಲವೆ ಮೂರು ಕೊಳಗ ನೀರು ಹಿಡಿಯುವಷ್ಟು ಆರು ಕಲ್ಲಿನ ಬಾನೆಗಳು ಇದ್ದವು.

7ಯೇಸು ಅವರಿಗೆ--ಆ ಬಾನೆ ಗಳಲ್ಲಿ ನೀರು ತುಂಬಿರಿ ಅಂದನು. ಅವರು ಅವುಗಳನ್ನು ಕಂಠದವರೆಗೆ ತುಂಬಿದ್ದರು.

8ಆತನು ಅವರಿಗೆ--ಈಗ ಇದನ್ನು ತೋಡಿಕೊಂಡು ಹೋಗಿ ಔತಣದ ಪಾರುಪತ್ಯಗಾರನಿಗೆ ಕೊಡಿರಿ ಎಂದು ಹೇಳಲು ಅವರು ತಕ್ಕೊಂಡು ಹೋಗಿ ಕೊಟ್ಟರು.

9ಔತಣದ ಪಾರುಪತ್ಯ ಗಾರನು ದ್ರಾಕ್ಷಾರಸವಾದ ನೀರನ್ನು ರುಚಿ ನೋಡಿದಾಗ ಅದು ಎಲ್ಲಿಂದ ಬಂತೆಂದು ತಿಳಿಯದವನಾಗಿ (ನೀರನ್ನು ತೋಡಿಕೊಂಡ ಸೇವಕರಿಗೆ ತಿಳಿದಿತ್ತು) ಮದಲಿಂಗನನ್ನು ಕರೆದು

10ಅವನಿಗೆ--ಪ್ರತಿ ಮನುಷ್ಯನು ಮೊದಲು ಒಳ್ಳೇ ದ್ರಾಕ್ಷಾರಸವನ್ನು ಕೊಟ್ಟು ಜನರು ಚೆನ್ನಾಗಿ ಕುಡಿದ ಮೇಲೆ ಕನಿಷ್ಠವಾದದ್ದನ್ನು ಕೊಡುತ್ತಾನೆ; ಆದರೆ ನೀನು ಇದು ವರೆಗೆ ಒಳ್ಳೇ ದ್ರಾಕ್ಷಾರಸವನ್ನು ಇಟ್ಟು ಕೊಂಡಿದ್ದೀ ಅಂದನು.

ಯೋಹಾನನು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी