ಲೂಕನು 9:37

ಇದಾದ ಮೇಲೆ ಮರುದಿವಸ ಅವರು ಬೆಟ್ಟ ದಿಂದ ಕೆಳಗಿಳಿದು ಬಂದಾಗ ಬಹಳ ಜನರು ಆತನನ್ನು ಸಂಧಿಸಿದರು.

ಸಂದರ್ಭದೊಂದಿಗೆ ಓದಿ · ಲೂಕನು 9

35ಆಗ ಮೇಘ ದೊಳಗಿಂದ--ಈತನು ಪ್ರಿಯನಾಗಿರುವ ನನ್ನ ಮಗನು; ಈತನ ಮಾತನ್ನು ಕೇಳಿರಿ ಎಂದು ಹೇಳುವ ಧ್ವನಿಯಾಯಿತು.

36ಆ ಧ್ವನಿಯಾದ ನಂತರ (ಅವರು) ಯೇಸುವನ್ನು ಮಾತ್ರ ನೋಡಿದರು. ಅವರು ನೋಡಿ ದವುಗಳನ್ನು ಆ ದಿವಸಗಳಲ್ಲಿ ಯಾರಿಗೂ ಹೇಳದೆ ಸುಮ್ಮನಿದ್ದರು.

37ಇದಾದ ಮೇಲೆ ಮರುದಿವಸ ಅವರು ಬೆಟ್ಟ ದಿಂದ ಕೆಳಗಿಳಿದು ಬಂದಾಗ ಬಹಳ ಜನರು ಆತನನ್ನು ಸಂಧಿಸಿದರು.

38ಆಗ ಇಗೋ, ಆ ಗುಂಪಿನೊಳಗಿಂದ ಒಬ್ಬ ಮನುಷ್ಯನು ಕೂಗಿ--ಬೋಧಕನೇ, ನನ್ನ ಮಗನ ಮೇಲೆ ದೃಷ್ಟಿಯಿಡು ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ; ಯಾಕಂದರೆ ಅವನು ನನಗೆ ಒಬ್ಬನೇ ಮಗನು.

39ಇಗೋ, ದೆವ್ವವು ಅವನನ್ನು ಹಿಡಿಯುತ್ತಲೇ ಅವನು ಫಕ್ಕನೆ ಕೂಗಿಕೊಳ್ಳುತ್ತಾನೆ; ಇದಲ್ಲದೆ ಅದು ನೊರೆ ಸುರಿಯುವಷ್ಟು ಅವನನ್ನು ಒದ್ದಾಡಿಸುವದಲ್ಲದೆ ಜಜ್ಜುವದು. ಅದು ಅವನನ್ನು ಬಿಟ್ಟುಹೋಗುವದು ಕಷ್ಟ.

ಲೂಕನು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी