೧ ಸಮುವೇಲನು 6:6

ಐಗುಪ್ತ್ಯರೂ ಫರೋಹನೂ ತಮ್ಮ ಹೃದಯವನ್ನು ಕಠಿಣ ಮಾಡಿದ ಹಾಗೆ ನೀವು ನಿಮ್ಮ ಹೃದಯವನ್ನು ಕಠಿಣಪಡಿಸುವದೇನು? ಯಾಕಂದರೆ ಆತನು ಅವರ ಮಧ್ಯದಲ್ಲಿ ಆಶ್ಚರ್ಯವಾದ ಕ್ರಿಯೆಗಳನ್ನು ನಡಿಸಿದಾಗ ಅವರು ಇಸ್ರಾಯೇಲ್ಯರನ್ನು ಹೋಗುವ ಹಾಗೆ ಕಳುಹಿಸಲಿಲ್ಲವೋ?

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 6

4ಆಗ ಅವರು--ಅಪ ರಾಧ ಕಾಣಿಕೆಯಾಗಿ ನಾವು ಅದರ ಸಂಗಡ ಕಳುಹಿಸ ತಕ್ಕದ್ದೇನು ಅಂದರು. ಅದಕ್ಕವರು--ಫಿಲಿಷ್ಟಿಯರ ಅಧಿ ಪತಿಗಳ ಲೆಕ್ಕಕ್ಕೆ ಸರಿಯಾಗಿ ಒಬ್ಬೊಬ್ಬರಿಗೆ ಗಡ್ಡೆವ್ಯಾಧಿಯ ವಿಧವಾದ ಐದು ಬಂಗಾರದ ಗಡ್ಡೆಗಳನ್ನೂ ಬಂಗಾರದ ಐದು ಇಲಿಗಳನ್ನೂ ಕಳುಹಿಸಿರಿ; ಯಾಕಂದರೆ ನಿಮ್ಮೆ ಲ್ಲರಿಗೂ ನಿಮ್ಮ ಅಧಿಪತಿಗಳಿಗೂ ಒಂದೇ ತರವಾದ ವ್ಯಾಧಿಯು ಅದೆ.

5ಆದದರಿಂದ ನಿಮ್ಮ ಗಡ್ಡೆವ್ಯಾಧಿಯ ರೂಪಗಳನ್ನೂ ಭೂಮಿಯನ್ನು ಕೆಡಿಸಿಬಿಟ್ಟ ನಿಮ್ಮ ಇಲಿ ಗಳ ರೂಪಗಳನ್ನೂ ನೀವು ಮಾಡಿ ಇಸ್ರಾಯೇಲ್‌ ದೇವರಿಗೆ ಮಹಿಮೆಯನ್ನು ಸಲ್ಲಿಸಬೇಕು. ಆಗ ಒಂದು ವೇಳೆ ಆತನು ನಿಮ್ಮ ಮೇಲೆಯೂ ನಿಮ್ಮ ದೇವರುಗಳ ಮೇಲೆಯೂ ನಿಮ್ಮ ಭೂಮಿಯ ಮೇಲೆಯೂ ಇರುವ ತನ್ನ ಕೈಯನ್ನು ತೆಗೆದು ಹಗುರಮಾಡುವನು.

6ಐಗುಪ್ತ್ಯರೂ ಫರೋಹನೂ ತಮ್ಮ ಹೃದಯವನ್ನು ಕಠಿಣ ಮಾಡಿದ ಹಾಗೆ ನೀವು ನಿಮ್ಮ ಹೃದಯವನ್ನು ಕಠಿಣಪಡಿಸುವದೇನು? ಯಾಕಂದರೆ ಆತನು ಅವರ ಮಧ್ಯದಲ್ಲಿ ಆಶ್ಚರ್ಯವಾದ ಕ್ರಿಯೆಗಳನ್ನು ನಡಿಸಿದಾಗ ಅವರು ಇಸ್ರಾಯೇಲ್ಯರನ್ನು ಹೋಗುವ ಹಾಗೆ ಕಳುಹಿಸಲಿಲ್ಲವೋ?

7ಆದರೆ ಈಗ ನೀವು ಒಂದು ಹೊಸ ಬಂಡಿಯನ್ನು ಮಾಡಿ ನೊಗವನ್ನು ಹೊರದೆ ಇರುವ ಹಾಲು ಕರೆಯುವ ಎರಡು ಹಸುಗಳನ್ನು ತಕ್ಕೊಂಡು ಅವುಗಳನ್ನು ಬಂಡಿಗೆ ಕಟ್ಟಿ ಅವುಗಳ ಕರುಗಳನ್ನು ಅವುಗಳ ಹಿಂದೆ ಹೋಗದ ಹಾಗೆ ಮನೆಗೆ ತೆಗೆದುಕೊಂಡು ಬಂದು

8ಕರ್ತನ ಮಂಜೂಷವನ್ನು ತೆಗೆದು, ಬಂಡಿಯ ಮೇಲೆ ಇಟ್ಟು ನೀವು ಕಳುಹಿಸಿ ಕೊಡುವ ನಿಮ್ಮ ಅಪರಾಧ ಕಾಣಿಕೆಯಾದ ಬಂಗಾರದ ಆಭರಣಗಳನ್ನು ಒಂದು ಚಿಕ್ಕ ಪೆಟ್ಟಿಗೆಯಲ್ಲಿ ಹಾಕಿ ಕಳುಹಿಸಿರಿ; ಆಗ ನೋಡಿರಿ.

೧ ಸಮುವೇಲನು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी