ಆಗ ಕರ್ತನು ಆಜ್ಞಾಪಿಸಿದ ಹಾಗೆ ಮೋಶೆಯು ಆತನ ಸನ್ನಿಧಿಯಿಂದ ಕೋಲನ್ನು ತಕ್ಕೊಂಡನು.
7ಆಗ ಕರ್ತನು ಮೋಶೆಯ ಸಂಗಡ ಮಾತನಾಡಿ--
8ಕೋಲನ್ನು ತಕ್ಕೊಂಡು ನೀನು ನಿನ್ನ ಸಹೋದರನಾದ ಆರೋನನು ಸಭೆಯನ್ನು ಕೂಡಿಸಿ ಕೊಂಡು ಅವರ ಕಣ್ಣುಗಳ ಮುಂದೆ ಬಂಡೆಯ ಸಂಗಡ ಮಾತನಾಡಿರಿ; ಅದು ತನ್ನ ನೀರನ್ನು ಕೊಡುವದು; ನೀನು ಅವರಿಗೋಸ್ಕರ ಬಂಡೆಯೊಳಗಿಂದ ನೀರನ್ನು ಹೊರಗೆ ತರುವಿ; ಸಭೆಗೂ ಅವರ ಪಶುಗಳಿಗೂ ನೀನು ಕುಡಿಯಲು ಕೊಡುವಿ ಎಂದು ಹೇಳಿದನು.
9ಆಗ ಕರ್ತನು ಆಜ್ಞಾಪಿಸಿದ ಹಾಗೆ ಮೋಶೆಯು ಆತನ ಸನ್ನಿಧಿಯಿಂದ ಕೋಲನ್ನು ತಕ್ಕೊಂಡನು.
10ಮೋಶೆಯೂ ಆರೋನನೂ ಸಭೆಯನ್ನು ಬಂಡೆಯ ಮುಂದೆ ಕೂಡಿಸಿ ಅವರಿಗೆ--ತಿರುಗಿಬಿದ್ದವರೇ, ಕೇಳಿರಿ; ನಾವು ನಿಮಗೋಸ್ಕರ ಈ ಬಂಡೆಯೊಳಗಿಂದ ನೀರನ್ನು ಹೊರಡಿಸಬೇಕೋ ಎಂದು ಹೇಳಿದರು.
11ಮೋಶೆಯು ತನ್ನ ಕೈಯನ್ನು ಎತ್ತಿ ತನ್ನ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆದನು; ಆಗ ಬಹಳ ನೀರು ಹೊರಗೆ ಬಂತು; ಸಭೆಯೂ ಅವರ ಪಶುಗಳೂ ಕುಡಿದವು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ