ವಿಮೋಚನಕಾಂಡ 24:12

ಕರ್ತನು ಮೋಶೆಗೆ--ಬೆಟ್ಟವನ್ನೇರಿ ನನ್ನ ಬಳಿಗೆ ಬಂದು ಅಲ್ಲೇ ಇರು. ನಾನು ನಿನಗೆ ಕಲ್ಲಿನ ಹಲಗೆಗಳನ್ನು ಅವರಿಗೆ ಕಲಿಸುವದಕ್ಕೋಸ್ಕರ ನಾನು ಬರೆದ ನ್ಯಾಯ ಪ್ರಮಾಣವನ್ನು ಆಜ್ಞೆಗೆಳನ್ನು ಕೊಡುವೆನು ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 24

10ಅವರು ಇಸ್ರಾಯೇಲಿನ ದೇವರನ್ನು ನೋಡಿದರು. ಆತನ ಪಾದಗಳ ಕೆಳಗೆ ನೀಲವರ್ಣದ ಕಲ್ಲಿನ ಕೆಲಸಕ್ಕೆ ಸಮಾನವಾದದ್ದೂ ಆಕಾಶದ ಹಾಗೆ ನಿರ್ಮಲವಾದದ್ದೂ ಇತ್ತು.

11ಆದರೆ ಇಸ್ರಾಯೇಲ್‌ ಮಕ್ಕಳ ಶ್ರೇಷ್ಠರ ಮೇಲೆ ಆತನು ಕೈ ಹಾಕಲಿಲ್ಲ. ಅವರು ಸಹ ದೇವರ ದರ್ಶನದ ನಂತರ ತಿಂದು ಕುಡಿದರು.

12ಕರ್ತನು ಮೋಶೆಗೆ--ಬೆಟ್ಟವನ್ನೇರಿ ನನ್ನ ಬಳಿಗೆ ಬಂದು ಅಲ್ಲೇ ಇರು. ನಾನು ನಿನಗೆ ಕಲ್ಲಿನ ಹಲಗೆಗಳನ್ನು ಅವರಿಗೆ ಕಲಿಸುವದಕ್ಕೋಸ್ಕರ ನಾನು ಬರೆದ ನ್ಯಾಯ ಪ್ರಮಾಣವನ್ನು ಆಜ್ಞೆಗೆಳನ್ನು ಕೊಡುವೆನು ಎಂದು ಹೇಳಿದನು.

13ಆಗ ಮೋಶೆಯೂ ಅವನ ಸೇವಕನಾದ ಯೆಹೋಶುವನೂ ಎದ್ದು ನಿಂತರು. ಮೋಶೆಯಾ ದರೋ ದೇವರ ಬೆಟ್ಟವನ್ನು ಏರಿದನು.

14ಹಿರಿಯರಿಗೆ ಅವನು--ನಾವು ನಿಮ್ಮ ಬಳಿಗೆ ತಿರಿಗಿ ಬರುವ ವರೆಗೆ ಇಲ್ಲಿ ನಮಗಾಗಿ ಕಾದುಕೊಂಡಿರ್ರಿ; ಇಗೋ, ಆರೋ ನನೂ ಹೂರನೂ ನಿಮ್ಮ ಸಂಗಡ ಇರುತ್ತಾರೆ. ಯಾರಿ ಗಾದರೂ ವ್ಯಾಜ್ಯವಿದ್ದರೆ ಅವನು ಅವರ ಬಳಿಗೆ ಬರಲಿ ಅಂದನು.

ವಿಮೋಚನಕಾಂಡ 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी