ಯಾಜಕಕಾಂಡ 13:10

ಆಗ ಯಾಜಕನು ಅವನನ್ನು ನೋಡಬೇಕು; ಇಗೋ, ಆ ಬಾವು ಚರ್ಮದಲ್ಲಿ ಬೆಳ್ಳಗಿದ್ದು ಅದರ ಕೂದಲು ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಬಾವಿನಲ್ಲಿ ಹಸಿಮಾಂಸವು ಇದ್ದರೆ

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 13

8ಯಾಜ ಕನು ಅದನ್ನು ನೋಡಿದಾಗ ಇಗೋ, ಕಜ್ಜಿಯ ಚರ್ಮವೇ ಹರಡಿರುವದಾದರೆ ಆಗ ಅವನು ಅಶುದ್ಧ ನೆಂದು ಯಾಜಕನು ನಿರ್ಣಯಿಸಬೇಕು. ಅದು ಕುಷ್ಠವಾಗಿರುವದು.

9ಕುಷ್ಠರೋಗವು ಮನುಷ್ಯನಲ್ಲಿ ಇರುವದಾದರೆ ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರ ಬೇಕು.

10ಆಗ ಯಾಜಕನು ಅವನನ್ನು ನೋಡಬೇಕು; ಇಗೋ, ಆ ಬಾವು ಚರ್ಮದಲ್ಲಿ ಬೆಳ್ಳಗಿದ್ದು ಅದರ ಕೂದಲು ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಬಾವಿನಲ್ಲಿ ಹಸಿಮಾಂಸವು ಇದ್ದರೆ

11ಅದು ಅವನ ಶರೀರದ ಚರ್ಮದಲ್ಲಿ ಒಂದು ಹಳೇ ಕುಷ್ಠವಾಗಿರುವದು. ಆಗ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು ಮತ್ತು ಅವನನ್ನು ಮುಚ್ಚಿಡಬಾರದು, ಅವನು ಅಶುದ್ಧನಾಗಿರುವನು.

12ಕುಷ್ಠವು ಒಡೆದು ಚರ್ಮದ ಹೊರಗೆ ಹರಡಿ ಕೊಂಡಿದ್ದರೆ ಮತ್ತು ಚರ್ಮವನ್ನೆಲ್ಲಾ ಹರಡಿಕೊಂಡು ತಲೆಯಿಂದ ಅವನ ಪಾದದ ವರೆಗೂ ಹರಡಿರುವದನ್ನು ಯಾಜಕನು ಎಲ್ಲಿಯಾದರೂ ನೋಡಿದರೆ

ಯಾಜಕಕಾಂಡ 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी