೨ ಪೂರ್ವಕಾಲವೃತ್ತಾಂತ 7:12

ಕರ್ತನು ರಾತ್ರಿಯಲ್ಲಿ ಸೊಲೊಮೋನನಿಗೆ ಕಾಣಿಸಿ ಕೊಂಡು ಅವನಿಗೆ--ನಾನು ನಿನ್ನ ಪ್ರಾರ್ಥನೆಯನ್ನು ಕೇಳಿ ಬಲಿಯರ್ಪಿಸುವ ಆಲಯವಾಗಿ ನನಗೆ ಈ ಸ್ಥಳವನ್ನು ಆದುಕೊಂಡಿದ್ದೇನೆ.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 7

10ಏಳನೇ ತಿಂಗಳಿನ ಇಪ್ಪತ್ತ ಮೂರನೇ ದಿವಸದಲ್ಲಿ ಅವನು ಜನರನ್ನು ತಮ್ಮ ಡೇರೆ ಗಳಿಗೆ ಕಳುಹಿಸಿಬಿಟ್ಟನು. ಕರ್ತನು ದಾವೀದನಿಗೂ ಸೊಲೊಮೋನನಿಗೂ ತನ್ನ ಜನವಾದ ಇಸ್ರಾಯೇ ಲಿಗೂ ಮಾಡಿದ ಉಪಕಾರಕ್ಕೋಸ್ಕರ ಅವರು ಹೃದಯ ದಲ್ಲಿ ಆನಂದವಾಗಿ ಸಂತೋಷಪಡುತ್ತಾ ಹೋದರು.

11ಹೀಗೆಯೇ ಸೊಲೊಮೋನನು ಕರ್ತನ ಆಲಯ ವನ್ನೂ ಅರಸನ ಮನೆಯನ್ನೂ ಕಟ್ಟಿಸಿ ಮುಗಿಸಿದನು. ಕರ್ತನ ಆಲಯದಲ್ಲಿಯೂ ತನ್ನ ಮನೆಯಲ್ಲಿಯೂ ಮಾಡಲು ಸೊಲೊಮೋನನ ಹೃದಯದಲ್ಲಿ ಬಂದ ದ್ದನ್ನೆಲ್ಲಾ ಅವನು ಸಫಲವಾಗುವಂತೆ ಸಾಧಿಸಿದನು.

12ಕರ್ತನು ರಾತ್ರಿಯಲ್ಲಿ ಸೊಲೊಮೋನನಿಗೆ ಕಾಣಿಸಿ ಕೊಂಡು ಅವನಿಗೆ--ನಾನು ನಿನ್ನ ಪ್ರಾರ್ಥನೆಯನ್ನು ಕೇಳಿ ಬಲಿಯರ್ಪಿಸುವ ಆಲಯವಾಗಿ ನನಗೆ ಈ ಸ್ಥಳವನ್ನು ಆದುಕೊಂಡಿದ್ದೇನೆ.

13ಮಳೆ ಇಲ್ಲದ ಹಾಗೆ ನಾನು ಆಕಾಶವನ್ನು ಮುಚ್ಚಿದರೂ ದೇಶವನ್ನು ತಿಂದು ಬಿಡಲು ಮಿಡಿತೆಗಳಿಗೆ ಆಜ್ಞಾಪಿಸಿದರೂ

14ಇಲ್ಲವೆ ನನ್ನ ಜನರ ಮಧ್ಯದಲ್ಲಿ ಜಾಡ್ಯವನ್ನು ಕಳುಹಿಸಿದರೂ ನನ್ನ ಹೆಸರಿನಿಂದ ಕರೆಯಲ್ಪಟ್ಟ ನನ್ನ ಜನರು ತಮ್ಮನ್ನು ತಗ್ಗಿಸಿಕೊಂಡು ಪ್ರಾರ್ಥನೆ ಮಾಡಿ ನನ್ನ ಮುಖವನ್ನು ಹುಡುಕಿ ತಮ್ಮ ದುರ್ಮಾರ್ಗಗಳಿಂದ ತಿರುಗಿದರೆ ನಾನು ಆಕಾಶದಿಂದ ಕೇಳಿ ಅವರ ಪಾಪವನ್ನು ಮನ್ನಿಸಿ ಅವರ ದೇಶವನ್ನು ಗುಣಮಾಡುವೆನು.

೨ ಪೂರ್ವಕಾಲವೃತ್ತಾಂತ 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी