ಆದರೆ ನಾನು ಕರ್ತನನ್ನು ಎದುರು ನೋಡುವೆನು; ನನ್ನ ರಕ್ಷಣೆಯ ದೇವರಿಗೋಸ್ಕರ ಕಾದುಕೊಳ್ಳುವೆನು; ನನ್ನ ದೇವರು ನನ್ನನ್ನು ಕೇಳುವನು.
5ಸ್ನೇಹಿತನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸವಿಡಬೇಡಿರಿ; ನಿನ್ನ ಎದೆಯ ಮೇಲೆ ಮಲಗುವವಳಿಗೆ ನಿನ್ನ ಬಾಯಿಯ ಬಾಗಲುಗಳನ್ನು ಕಾಯಿ.
6ಮಗನು ತನ್ನ ತಂದೆಯನ್ನು ಅವಮಾನ ಮಾಡುತ್ತಾನೆ; ಮಗಳು ತನ್ನ ತಾಯಿಗೂ ಸೊಸೆಯು ತನ್ನ ಅತ್ತೆಗೂ ವಿರೋಧವಾಗಿ ಏಳುತ್ತಾರೆ; ಒಬ್ಬ ಮನುಷ್ಯನಿಗೆ ಸ್ವಂತ ಮನೆಯವರೇ ಶತ್ರುಗಳು.
7ಆದರೆ ನಾನು ಕರ್ತನನ್ನು ಎದುರು ನೋಡುವೆನು; ನನ್ನ ರಕ್ಷಣೆಯ ದೇವರಿಗೋಸ್ಕರ ಕಾದುಕೊಳ್ಳುವೆನು; ನನ್ನ ದೇವರು ನನ್ನನ್ನು ಕೇಳುವನು.
8ನನ್ನ ಶತ್ರುವೇ, ನನ್ನ ಮೇಲೆ ಸಂತೋಷಪಡಬೇಡ; ನಾನು ಬಿದ್ದಿದ್ದರೂ ತಿರುಗಿ ಏಳುವೆನು; ಕತ್ತಲೆಯಲ್ಲಿ ಕೂತುಕೊಂಡರೂ ನನಗೆ ಬೆಳಕು ಕರ್ತನೇ.
9ನಾನು ಕರ್ತನಿಗೆ ವಿರೋಧ ವಾಗಿ ಪಾಪ ಮಾಡಿದ್ದರಿಂದ ಆತನು ತನ್ನ ವ್ಯಾಜ್ಯವಾಡಿ ನನ್ನ ನ್ಯಾಯವನ್ನು ನಡಿಸುವ ತನಕ ಆತನ ಕೋಪವನ್ನು ತಾಳುವೆನು; ಆತನು ನನ್ನನ್ನು ಬೆಳಕಿಗೆ ತರುವನು, ಆತನ ನೀತಿಯನ್ನು ನೋಡುವೆನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ