ಮಂತ್ರವಾದಿಗಳ ಕಡೆಗೆ ತಿರುಗಿ ಕೊಳ್ಳುವವನಿಗೂ ವ್ಯಭಿಚಾರಮಾಡುವಂತೆ ಮಾಟಗಾರರನ್ನು ಹಿಂಬಾಲಿಸುವವನಿಗೂ ನಾನು ವಿಮುಖನಾಗಿರುವೆನು, ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
6ಮಂತ್ರವಾದಿಗಳ ಕಡೆಗೆ ತಿರುಗಿ ಕೊಳ್ಳುವವನಿಗೂ ವ್ಯಭಿಚಾರಮಾಡುವಂತೆ ಮಾಟಗಾರರನ್ನು ಹಿಂಬಾಲಿಸುವವನಿಗೂ ನಾನು ವಿಮುಖನಾಗಿರುವೆನು, ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
7ಆದದರಿಂದ ನೀವು ನಿಮ್ಮನ್ನು ಶುದ್ಧಪಡಿಸಿಕೊಂಡು ಪರಿಶುದ್ಧರಾಗಿರಿ; ನಿಮ್ಮ ದೇವರಾಗಿರುವ ಕರ್ತನು ನಾನೇ.
8ನೀವು ನನ್ನ ನಿಯಮಗಳನ್ನು ಕೈಕೊಂಡು ಅವುಗಳನ್ನು ಮಾಡಬೇಕು; ನಿಮ್ಮನ್ನು ಶುದ್ಧಪಡಿಸುವ ಕರ್ತನು ನಾನೇ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ