ಮಿಕ 2:7

ಯಾಕೋಬಿನ ಮನೆತನದವ ರೆಂದು ಹೆಸರುಗೊಂಡವರೇ, ಕರ್ತನ ಆತ್ಮವು ಕಡಿಮೆ ಯಾಯಿತೋ? ಇವು ಆತನ ಕ್ರಿಯೆಗಳೋ? ಯಥಾ ರ್ಥವಾಗಿ ನಡೆಯುವವನಿಗೆ ನನ್ನ ಮಾತುಗಳು ಒಳ್ಳೇದನ್ನು ಮಾಡುವದಿಲ್ಲವೋ?

ಸಂದರ್ಭದೊಂದಿಗೆ ಓದಿ · ಮಿಕ 2

5ಆದದರಿಂದ ಕರ್ತನ ಸಭೆಯಲ್ಲಿ ಪಾಲಿಗಾಗಿ ನೂಲು ಹಾಕುವವನು ನಿನಗೆ ಒಬ್ಬನೂ ಇರುವದಿಲ್ಲ.

6ಪ್ರವಾದಿಸಬೇಡಿರೆಂದು ಪ್ರವಾದಿಸುವವರಿಗೆ ಅನ್ನು ತ್ತಾರೆ; ಅವರಿಗೆ ಆತನು ಪ್ರವಾದಿಸನು, ಆದರೆ ಅವರು ನಾಚಿಕೆಪಡುವದಿಲ್ಲ.

7ಯಾಕೋಬಿನ ಮನೆತನದವ ರೆಂದು ಹೆಸರುಗೊಂಡವರೇ, ಕರ್ತನ ಆತ್ಮವು ಕಡಿಮೆ ಯಾಯಿತೋ? ಇವು ಆತನ ಕ್ರಿಯೆಗಳೋ? ಯಥಾ ರ್ಥವಾಗಿ ನಡೆಯುವವನಿಗೆ ನನ್ನ ಮಾತುಗಳು ಒಳ್ಳೇದನ್ನು ಮಾಡುವದಿಲ್ಲವೋ?

8ಇತ್ತೀಚೆಗೆ ನನ್ನ ಜನರು ವೈರಿಯ ಹಾಗೆ ಎದ್ದಿದ್ದಾರೆ; ಯುದ್ಧದಿಂದ ತಿರುಗಿಕೊಂಡು ಭದ್ರವಾಗಿ ಹಾದುಹೋಗುವವರ ವಸ್ತ್ರದ ಸಂಗಡ ನಿಲುವಂಗಿಯನ್ನು ನೀವು ಕಿತ್ತುಕೊ ಳ್ಳುತ್ತೀರಿ.

9ನನ್ನ ಜನರ ಸ್ತ್ರೀಯರನ್ನು ಅವರ ರಮ್ಯ ವಾದ ಮನೆಗಳೊಳಗಿಂದ ಹೊರಡಿಸಿದ್ದೀರಿ; ಅವರ ಮಕ್ಕಳಿಂದ ನನ್ನ ಮಹಿಮೆಯನ್ನು ಎಂದೆಂದಿಗೂ ತೆಗೆದಿ ದ್ದೀರಿ.

ಮಿಕ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी