ಅರಣ್ಯಕಾಂಡ 20:26

ಆರೋನನ ವಸ್ತ್ರಗಳನ್ನು ತೆಗೆದು ಅವುಗಳನ್ನು ಅವನ ಮಗನಾದ ಎಲ್ಲಾಜಾರ ನಿಗೆ ತೊಡಿಸು; ಆರೋನನು ಅಲ್ಲಿಯೇ ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಡುವನು ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ಅರಣ್ಯಕಾಂಡ 20

24ಆರೋನನು ತನ್ನ ಜನರ ಸಂಗಡ ಕೂಡಿಸಲ್ಪಡುವನು; ನೀವು ಮೆರೀಬಾದ ನೀರಿನ ಹತ್ತಿರ ನನ್ನ ಮಾತಿಗೆ ತಿರುಗಿ ಬಿದ್ದದರಿಂದ ನಾನು ಇಸ್ರಾಯೇಲ್‌ ಮಕ್ಕಳಿಗೆ ಕೊಟ್ಟ ದೇಶಕ್ಕೆ ಅವನು ಪ್ರವೇಶಿಸುವದಿಲ್ಲ.

25ಆರೋನ ನನ್ನೂ ಅವನ ಮಗನಾದ ಎಲ್ಲಾಜಾರನನ್ನೂ ಹೋರ್‌ ಬೆಟ್ಟಕ್ಕೆ ಕರಕೊಂಡು ಬಂದು.

26ಆರೋನನ ವಸ್ತ್ರಗಳನ್ನು ತೆಗೆದು ಅವುಗಳನ್ನು ಅವನ ಮಗನಾದ ಎಲ್ಲಾಜಾರ ನಿಗೆ ತೊಡಿಸು; ಆರೋನನು ಅಲ್ಲಿಯೇ ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಡುವನು ಎಂದು ಹೇಳಿದನು.

27ಕರ್ತನು ಆಜ್ಞಾಪಿಸಿದ ಪ್ರಕಾರ ಮೋಶೆಯು ಮಾಡಿದನು. ಅವರು ಸಮಸ್ತ ಸಭೆಯ ಕಣ್ಣು ಗಳಿಗೆದುರಾಗಿ ಹೋರ್‌ ಬೆಟ್ಟವನ್ನೇರಿದರು.

28ಆಗ ಮೋಶೆಯು ಆರೋನನ ವಸ್ತ್ರಗಳನ್ನು ತೆಗೆದು ಅವನ ಮಗನಾದ ಎಲ್ಲಾಜಾರನಿಗೆ ತೊಡಿಸಿದನು; ಆಗ ಆರೋನನು ಅಲ್ಲೆ ಬೆಟ್ಟದ ತುದಿಯಲ್ಲಿ ಸತ್ತನು. ಮೋಶೆಯೂ ಎಲ್ಲಾಜಾರನೂ ಬೆಟ್ಟದಿಂದ ಇಳಿದು ಬಂದರು.

ಅರಣ್ಯಕಾಂಡ 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी