ಆದಿಕಾಂಡ 31:25

ತರುವಾಯ ಲಾಬಾ ನನು ಯಾಕೋಬನನ್ನು ಸಂಧಿಸಿದಾಗ ಯಾಕೋಬನು ಬೆಟ್ಟದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು. ಲಾಬಾನನು ಸಹೋದರರ ಸಂಗಡ ಗಿಲ್ಯಾದ್‌ ಪರ್ವತದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 31

23ಆಗ ಅವನು ತನ್ನ ಸಹೋದರರನ್ನು ಕರಕೊಂಡು ಅವನನ್ನು ಬೆನ್ನಟ್ಟಿ ಏಳು ದಿನ ಪ್ರಯಾಣಮಾಡಿ ಗಿಲ್ಯಾದ್‌ ಪರ್ವತದಲ್ಲಿ ಅವನನ್ನು ಸಂಧಿಸಿದನು.

24ಆ ರಾತ್ರಿ ದೇವರು ಸ್ವಪ್ನದಲ್ಲಿ ಅರಾಮ್ಯನಾದ ಲಾಬಾನನ ಬಳಿಗೆ ಬಂದು ಅವನಿಗೆ--ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ ಕೆಟ್ಟದನ್ನಾಗಲಿ ಮಾತನಾಡದಂತೆ ಎಚ್ಚರಿಕೆಯಾಗಿರು ಅಂದನು.

25ತರುವಾಯ ಲಾಬಾ ನನು ಯಾಕೋಬನನ್ನು ಸಂಧಿಸಿದಾಗ ಯಾಕೋಬನು ಬೆಟ್ಟದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು. ಲಾಬಾನನು ಸಹೋದರರ ಸಂಗಡ ಗಿಲ್ಯಾದ್‌ ಪರ್ವತದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು.

26ಲಾಬಾನನು ಯಾಕೋಬನಿಗೆ--ನೀನು ಏನು ಮಾಡಿದಿ? ನನಗೆ ತಿಳಿಸದೆ ನೀನು ಕಳ್ಳನ ಹಾಗೆ ಓಡಿಬಂದಿಯಲ್ಲಾ. ನನ್ನ ಕುಮಾರ್ತೆಯರನ್ನು ಕತ್ತಿಯಿಂದ ಸೆರೆಹಿಡಿದವರ ಹಾಗೆ ತೆಗೆದುಕೊಂಡು ಬಂದಿಯಲ್ಲಾ.

27ಯಾಕೆ ನೀನು ಗುಪ್ತವಾಗಿ ಕಳ್ಳತನದಿಂದ ಓಡಿ ಬಂದಿ? ನೀನು ನನಗೆ ಯಾಕೆ ತಿಳಿಸಲಿಲ್ಲ? ತಿಳಿಸಿದ್ದರೆ ಸಂತೋಷದಿಂದ ಹಾಡು ತಾಳ ವೀಣೆಗಳ ಸಂಗಡ ನಿನ್ನನ್ನು ಕಳುಹಿಸುತ್ತಿದ್ದೆನು.

ಆದಿಕಾಂಡ 31 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी