೧ ಅರಸುಗಳು 11:19

ಇದಲ್ಲದೆ ಹದದನು ಫರೋಹನ ದೃಷ್ಟಿಯಲ್ಲಿ ಅತಿ ಕೃಪೆಯನ್ನು ಹೊಂದಿ ದನು. ಏನಂದರೆ, ಅವನು ರಾಣಿಯಾಗಿರುವ ತನ್ನ ಹೆಂಡತಿಯಾದ ತಖ್ಪೆನೇಸ್‌ಯೆಂಬವಳ ಸಹೋ ದರಿಯನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 11

17ಯೋವಾಬನು ಎದೋಮಿನಲ್ಲಿರುವ ಗಂಡಸರೆಲ್ಲರನ್ನು ಸಂಹರಿಸುವ ವರೆಗೂ ಇಸ್ರಾಯೇಲಿನ ಸಮಸ್ತ ಸೈನ್ಯದ ಸಂಗಡ ಅಲ್ಲಿ ಆರು ತಿಂಗಳು ಇದ್ದನು.

18ಆದರೆ ಹದದನೂ ಅವನ ಸಂಗಡ ಇರುವವರೂ ಮಿದ್ಯಾನನ್ನು ಬಿಟ್ಟು ಪಾರಾನಿಗೆ ಬಂದು ಅಲ್ಲಿಂದ ಮನುಷ್ಯರನ್ನು ತೆಗೆದುಕೊಂಡು ಐಗುಪ್ತದಲ್ಲಿ ಪ್ರವೇಶಿಸಿ ಐಗುಪ್ತದ ಅರಸನಾದ ಫರೋಹನ ಬಳಿಗೆ ಬಂದರು. ಅವನು ಇವನಿಗೆ ಮನೆಯನ್ನು ಕೊಟ್ಟು ಆಹಾರವನ್ನು ನೇಮಿಸಿ ಭೂಮಿಯನ್ನು ಕೊಟ್ಟನು.

19ಇದಲ್ಲದೆ ಹದದನು ಫರೋಹನ ದೃಷ್ಟಿಯಲ್ಲಿ ಅತಿ ಕೃಪೆಯನ್ನು ಹೊಂದಿ ದನು. ಏನಂದರೆ, ಅವನು ರಾಣಿಯಾಗಿರುವ ತನ್ನ ಹೆಂಡತಿಯಾದ ತಖ್ಪೆನೇಸ್‌ಯೆಂಬವಳ ಸಹೋ ದರಿಯನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.

20ತಖ್ಪೆನೇಸ್‌ ಸಹೋದರಿಯು ಅವನಿಗೆ ಗೆನುಬ ತನೆಂಬ ಮಗನನ್ನು ಹೆತ್ತಳು. ತಖ್ಪೆನೇಸ್‌ ಇವನನ್ನು ಫರೋಹನ ಮನೆಯಲ್ಲಿ ಮೊಲೆ ಬಿಡಿಸಿದಳು. ಗೆನುಬತನು ಫರೋಹನ ಮನೆಯಲ್ಲಿ ಅವನ ಮಕ್ಕಳ ಸಂಗಡ ಇದ್ದನು.

21ಆದರೆ ದಾವೀದನು ತನ್ನ ಪಿತೃಗಳ ಸಂಗಡ ಮಲಗಿದ್ದಾನೆಂದೂ ಸೈನ್ಯಾಧಿಪತಿಯಾದ ಯೋವಾಬನು ಸತ್ತುಹೋದನೆಂದೂ ಹದದನು ಐಗುಪ್ತದಲ್ಲಿ ಕೇಳಿ ಫರೋಹನಿಗೆ--ನಾನು ನನ್ನ ದೇಶಕ್ಕೆ ಹೋಗುವ ಹಾಗೆ ನನ್ನನ್ನು ಕಳುಹಿಸು ಅಂದನು.

೧ ಅರಸುಗಳು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी