ಆಗ ಅರಸನಾದ ಚಿದ್ಕೀಯನು ಇಗೋ, ಅವನು ನಿಮ್ಮ ಕೈಯಲ್ಲಿ ಇದ್ದಾನೆ; ನಿಮಗೆ ವಿರೋಧವಾಗಿ ಅರಸನು ಏನು ಮಾಡಬಲ್ಲವ ನಲ್ಲ ಅಂದನು.
3ಅವನು ಬದುಕುವನು. ಕರ್ತನು ಹೇಳುವದೇನಂದರೆ--ಈ ಪಟ್ಟಣವು ನಿಶ್ಚಯವಾಗಿ ಬಾಬೆಲ್ ಅರಸನ ಸೈನ್ಯದ ಕೈಯಲ್ಲಿ ಒಪ್ಪಿಸಲ್ಪಡುವದು; ಅದು ಅದನ್ನು ವಶಮಾಡಿ ಕೊಳ್ಳುವದು.
4ಆದದರಿಂದ ಆ ಪ್ರಧಾನರು ಅರಸನಿಗೆ --ಈ ಮನುಷ್ಯನು ಸಾಯಲಿ; ಯಾಕಂದರೆ ಇವನು ಇಂಥಾ ಮಾತುಗಳನ್ನು ಅವರ ಸಂಗಡ ಆಡಿ ಈ ಪಟ್ಟಣದಲ್ಲಿ ಉಳಿದ ಎಲ್ಲಾ ಯುದ್ಧಸ್ಥರ ಕೈಗಳನ್ನೂ ಎಲ್ಲಾ ಜನರ ಕೈಗಳನ್ನೂ ಬಲಹೀನ ಮಾಡುತ್ತಾನೆ; ಈ ಮನುಷ್ಯನು ಜನರ ಕ್ಷೇಮವನ್ನಲ್ಲ ಅವರ ಕೇಡನ್ನು ಹುಡುಕುತ್ತಾನೆಂದು ಹೇಳಿದನು.
5ಆಗ ಅರಸನಾದ ಚಿದ್ಕೀಯನು ಇಗೋ, ಅವನು ನಿಮ್ಮ ಕೈಯಲ್ಲಿ ಇದ್ದಾನೆ; ನಿಮಗೆ ವಿರೋಧವಾಗಿ ಅರಸನು ಏನು ಮಾಡಬಲ್ಲವ ನಲ್ಲ ಅಂದನು.
6ಆಗ ಅವರು ಯೆರೆವಿಾಯನನ್ನು ತಕ್ಕೊಂಡು ಸೆರೆಮನೆಯ ಅಂಗಳದಲ್ಲಿದ್ದ ಹಮ್ಮೇಲೆಕನ ಮಗನಾದ ಮಲ್ಕೀಯನ ಕುಣಿಯಲ್ಲಿ ಹಾಕಿದರು; ಅವರು ಯೆರೆವಿಾಯನನ್ನು ಹಗ್ಗಗಳಿಂದ ಇಳಿಸಿದರು; ಆ ಕುಣಿಯಲ್ಲಿ ನೀರು ಇರಲಿಲ್ಲ; ಕೆಸರು ಮಾತ್ರ ಇತ್ತು; ಯೆರೆವಿಾಯನು ಕೆಸರಿನಲ್ಲಿ ಮುಣುಗಿದನು.
7ಆಗ ಅರಸನ ಮನೆಯಲ್ಲಿರುವ ಕಂಚುಕಿಯಾದ ಎಬೆದೆಲ್ಮೆಕನೆಂಬ ಕೂಷ್ಯನು ಯೆರೆವಿಾಯನನ್ನು ಅವರು ಕುಣಿಯಲ್ಲಿ ಹಾಕಿದರೆಂದು ಕೇಳಿದಾಗ ಅರಸನು ಬೆನ್ಯಾವಿಾನನ ಬಾಗಲಲ್ಲಿ ಕೂತಿರಲಾಗಿ,
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ