ಆತನು ನನಗೆ ಹೊಂಚುಹಾಕುವ ಕರಡಿಯ ಹಾಗೆಯೂ ಗುಪ್ತಸ್ಥಳಗಳಲ್ಲಿರುವ ಸಿಂಹದ ಹಾಗೆಯೂ ಇದ್ದಾನೆ.
8ನಾನು ಮೊರೆಯಿಟ್ಟು ಕೂಗಿದರೂ ಆತನು ನನ್ನ ಪ್ರಾರ್ಥನೆ ಯನ್ನು ಲಾಲಿಸುವದಿಲ್ಲ.
9ಕೆತ್ತಿದ ಕಲ್ಲಿನಿಂದ ನನ್ನ ಮಾರ್ಗಗಳನ್ನು ಮುಚ್ಚಿ ಆತನು ನನ್ನ ದಾರಿಗಳನ್ನು ಡೊಂಕು ಮಾಡಿದ್ದಾನೆ.
10ಆತನು ನನಗೆ ಹೊಂಚುಹಾಕುವ ಕರಡಿಯ ಹಾಗೆಯೂ ಗುಪ್ತಸ್ಥಳಗಳಲ್ಲಿರುವ ಸಿಂಹದ ಹಾಗೆಯೂ ಇದ್ದಾನೆ.
11ಆತನು ನನ್ನ ಮಾರ್ಗಗಳನ್ನು ತಪ್ಪಿಸಿ ನನ್ನನ್ನು ತುಂಡುಗಳನ್ನಾಗಿ ಕತ್ತರಿಸಿ ಹಾಳುಮಾಡಿದ್ದಾನೆ.
12ಆತನು ತನ್ನ ಬಿಲ್ಲನ್ನು ಬಗ್ಗಿಸಿದ್ದಾನೆ ಮತ್ತು ನನ್ನನ್ನು ಬಾಣಕ್ಕೆ ಗುರಿಮಾಡಿದ್ದಾನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ