ನ್ಯಾಯಸ್ಥಾಪಕರು 4:22

ಇಗೋ, ಸೀಸೆರನನ್ನು ಹಿಂದಟ್ಟುವ ಬಾರಾಕನು ಬಂದನು. ಆಗ ಯಾಯೇಲಳು ಅವನನ್ನು ಎದುರುಗೊಳ್ಳುವದಕ್ಕೆ ಹೊರಟುಹೋಗಿ ಅವನಿಗೆ--ಬಾ; ನೀನು ಹುಡುಕುವ ಮನುಷ್ಯನನ್ನು ನಾನು ನಿನಗೆ ತೋರಿಸುವೆನು ಎಂದು ಹೇಳಿದಳು. ಅವನು ಅವಳ ಬಳಿಗೆ ಬಂದಾಗ ಇಗೋ, ಸೀಸೆರನು ಸತ್ತು ಬಿದ್ದಿದ್ದನು; ಮೊಳೆಯು ಅವನ ಕಣತಲೆಯಲ್ಲಿ ಹೊಡೆದಿತ್ತು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 4

20ತಿರಿಗಿ ಅವನು ಅವಳಿಗೆನೀನು ಬಾಗಲಲ್ಲಿ ನಿಂತಿರು; ಯಾವನಾದರೂ ಬಂದು ಇಲ್ಲಿ ಯಾರಾದರೂ ಇದ್ದಾರೋ ಎಂದು ನಿನ್ನನ್ನು ಕೇಳಿದರೆ ಇಲ್ಲ ಎಂದು ಹೇಳು ಅಂದನು.

21ಹೆಬೆರನ ಹೆಂಡತಿಯಾದ ಯಾಯೇಲಳು ಗುಡಾರದ ಮೊಳೆ ಯನ್ನು ತೆಗೆದು ತನ್ನ ಕೈಯಲ್ಲಿ ಸುತ್ತಿಗೆಯನ್ನು ಹಿಡಿದು ಕೊಂಡು ಅವನು ಆಯಾಸದಿಂದ ಬಹಳ ನಿದ್ರೆ ಮಾಡುತ್ತಿರುವಾಗ ಮೆಲ್ಲಗೆ ಅವನ ಬಳಿಗೆ ಬಂದು ಅವನ ಕಣತಲೆಯಲ್ಲಿ ಆ ಮೊಳೆಯನ್ನು ಹೊಡೆದು ನೆಲದಲ್ಲಿ ನಾಟಿದಳು, ಅವನು ಸತ್ತನು.

22ಇಗೋ, ಸೀಸೆರನನ್ನು ಹಿಂದಟ್ಟುವ ಬಾರಾಕನು ಬಂದನು. ಆಗ ಯಾಯೇಲಳು ಅವನನ್ನು ಎದುರುಗೊಳ್ಳುವದಕ್ಕೆ ಹೊರಟುಹೋಗಿ ಅವನಿಗೆ--ಬಾ; ನೀನು ಹುಡುಕುವ ಮನುಷ್ಯನನ್ನು ನಾನು ನಿನಗೆ ತೋರಿಸುವೆನು ಎಂದು ಹೇಳಿದಳು. ಅವನು ಅವಳ ಬಳಿಗೆ ಬಂದಾಗ ಇಗೋ, ಸೀಸೆರನು ಸತ್ತು ಬಿದ್ದಿದ್ದನು; ಮೊಳೆಯು ಅವನ ಕಣತಲೆಯಲ್ಲಿ ಹೊಡೆದಿತ್ತು.

23ಹೀಗೆಯೇ ದೇವರು ಆ ದಿನದಲ್ಲಿ ಕಾನಾನ್ಯರ ಅರಸನಾದ ಯಾಬೀನನನ್ನು ಇಸ್ರಾಯೇಲ್‌ ಮಕ್ಕಳ ಮುಂದೆ ತಗ್ಗಿಸಿದನು.

24ಇಸ್ರಾ ಯೇಲ್‌ ಮಕ್ಕಳ ಕೈ ಕಾನಾನ್ಯರ ಅರಸನಾದ ಯಾಬೀನ ನನ್ನು ಕೊಂದುಬಿಡುವ ಮಟ್ಟಿಗೂ ಹೆಚ್ಚಿ ಜಯ ಹೊಂದಿತು.

ನ್ಯಾಯಸ್ಥಾಪಕರು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी