ಧರ್ಮೋಪದೇಶಕಾಂಡ 27:3

ನೀನು ದಾಟಿಹೋದ ಮೇಲೆ ನಿನ್ನ ಪಿತೃಗಳ ದೇವರಾದ ಕರ್ತನು ನಿನಗೆ ಹೇಳಿದ ಪ್ರಕಾರ ನಿನ್ನ ದೇವರಾದ ಕರ್ತನು ನಿನಗೆ ಕೊಡುವಂಥ ಹಾಲೂ ಜೇನೂ ಹರಿಯುವಂಥ ದೇಶಕ್ಕೆ ನೀನು ಬರುವ ಹಾಗೆ ಅವುಗಳ ಮೇಲೆ ಈ ನ್ಯಾಯಪ್ರಮಾಣದ ಮಾತುಗಳನ್ನೆಲ್ಲಾ ಬರೆಯಬೇಕು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 27

1ಇದಲ್ಲದೆ ಮೋಶೆ ಇಸ್ರಾಯೇಲಿನ ಹಿರಿಯರ ಸಂಗಡ ಜನರಿಗೆ--ನಾನು ನಿಮಗೆ ಈ ಹೊತ್ತು ಆಜ್ಞಾಪಿಸುವ ಆಜ್ಞೆಗಳನ್ನೆಲ್ಲಾ ಕಾಪಾ ಡಬೇಕು.

2ನೀವು ಯೊರ್ದನನ್ನು ದಾಟಿ ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ಬರುವ ದಿವಸದಲ್ಲಿ ದೊಡ್ಡ ಕಲ್ಲುಗಳನ್ನು ನಿಲ್ಲಿಸಿ ಅವುಗಳಿಗೆ ಗಿಲಾವು ಮಾಡಿಸಿ

3ನೀನು ದಾಟಿಹೋದ ಮೇಲೆ ನಿನ್ನ ಪಿತೃಗಳ ದೇವರಾದ ಕರ್ತನು ನಿನಗೆ ಹೇಳಿದ ಪ್ರಕಾರ ನಿನ್ನ ದೇವರಾದ ಕರ್ತನು ನಿನಗೆ ಕೊಡುವಂಥ ಹಾಲೂ ಜೇನೂ ಹರಿಯುವಂಥ ದೇಶಕ್ಕೆ ನೀನು ಬರುವ ಹಾಗೆ ಅವುಗಳ ಮೇಲೆ ಈ ನ್ಯಾಯಪ್ರಮಾಣದ ಮಾತುಗಳನ್ನೆಲ್ಲಾ ಬರೆಯಬೇಕು.

4ಆದದರಿಂದ ನೀವು ಯೊರ್ದನನ್ನು ದಾಟಿದ ಮೇಲೆ ನಾನು ಈಹೊತ್ತು ನಿಮಗೆ ಆಜ್ಞಾಪಿಸುವ ಕಲ್ಲುಗಳನ್ನು ಏಬಾಲ್‌ ಬೆಟ್ಟದಲ್ಲಿ ನಿಲ್ಲಿಸಿ ಅವುಗಳಿಗೆ ಗಿಲಾವು ಮಾಡಿಸಬೇಕು.

5ಅಲ್ಲಿ ನಿನ್ನ ದೇವರಾದ ಕರ್ತನಿಗೆ ಬಲಿಪೀಠವನ್ನು ಕಟ್ಟಬೇಕು ಅಂದರೆ ಕಲ್ಲಿನ ಬಲಿಪೀಠವನ್ನು ಕಟ್ಟಬೇಕು. ಆ ಕಲ್ಲುಗಳಿಗೆ ಕಬ್ಬಿಣದ ಆಯುಧ ತಗಲಿಸಬಾರದು.

ಧರ್ಮೋಪದೇಶಕಾಂಡ 27 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी