ಯೆಶಾಯ 38:14

ನಾನು ಬಾನಕ್ಕಿಯಂತೆಯೂ ಬಕದ ಹಾಗೂ ಕೀಚುಗುಟ್ಟಿದೆನು ಪಾರಿವಾಳದಂತೆ ಮೂಲುಗುತ್ತಿದ್ದೆನು. ನನ್ನ ಕಣ್ಣುಗಳು ಮೇಲಕ್ಕೆ ನೋಡುವದರಿಂದ ಕ್ಷೀಣವಾದವು. ಓ ಕರ್ತನೇ, ನಾನು ಬಾಧೆಪಡುತ್ತಿದ್ದೇನೆ; ನೀನು ನನಗೆ ಆಶ್ರಯನಾಗು.

ಸಂದರ್ಭದೊಂದಿಗೆ ಓದಿ · ಯೆಶಾಯ 38

12ನನ್ನ ಆಯುಷ್ಯ ಮುಗಿಯಿತು ಮತ್ತು ಕುರುಬನ ಗುಡಾರದಂತೆ ನನ್ನಿಂದ ತೆಗೆದುಹಾಕಲ್ಪಟ್ಟಿದೆ; ಆತನು ನನ್ನ ಆಯುಷ್ಯದ ಹಾಸನ್ನು ಕತ್ತರಿಸಿದ್ದರಿಂದ ನೇಯಿಗೆಯವನಂತೆ ನನ್ನ ಜೀವಮಾನವನ್ನು ಸುತ್ತಿಬಿಟ್ಟಿದ್ದೇನೆ; ಬೆಳಗಿನಿಂದ ರಾತ್ರಿಯೊಳಗೇ ನನ್ನನ್ನು ಕೊನೆಗಾಣಿಸುತ್ತೀ.

13ಆತನು ಸಿಂಹದಂತೆ ಎಲುಬುಗಳನ್ನೆಲ್ಲಾ ಮುರಿದಿದ್ದಾಗ್ಯೂ ಬೆಳಗಿನ ವರೆಗೂ ತಾಳಿಕೊಂಡೇ ಇದ್ದೆನು; ಬೆಳಗಿನಿಂದ ರಾತ್ರಿಯೊಳಗೇ ನನ್ನನ್ನು ಕೊನೆಗಾಣಿಸುತ್ತೀ.

14ನಾನು ಬಾನಕ್ಕಿಯಂತೆಯೂ ಬಕದ ಹಾಗೂ ಕೀಚುಗುಟ್ಟಿದೆನು ಪಾರಿವಾಳದಂತೆ ಮೂಲುಗುತ್ತಿದ್ದೆನು. ನನ್ನ ಕಣ್ಣುಗಳು ಮೇಲಕ್ಕೆ ನೋಡುವದರಿಂದ ಕ್ಷೀಣವಾದವು. ಓ ಕರ್ತನೇ, ನಾನು ಬಾಧೆಪಡುತ್ತಿದ್ದೇನೆ; ನೀನು ನನಗೆ ಆಶ್ರಯನಾಗು.

15ನಾನು ಏನು ಹೇಳಲಿ; ಆತನು ನನಗೆ ಮಾತುಕೊಟ್ಟು ತಾನೇ ಅದನ್ನು ನೆರವೇರಿಸಿ ದ್ದಾನೆ. ನನ್ನ ಆತ್ಮಕ್ಕೆ ಸಂಭವಿಸಿದ ದುಃಖದಲ್ಲಿ ನನ್ನ ವರುಷಗಳಲ್ಲೆಲ್ಲಾ ಮೆಲ್ಲಗೆ ನಡೆಯುವೆನು.

16ಓ ಕರ್ತನೇ, ಇಂಥಾ ಸಂಬಂಧಗಳಿಂದ ಮನುಷ್ಯರು ಬದುಕುತ್ತಾರೆ, ಇವೆಲ್ಲವುಗಳಿಂದಲೇ ನನ್ನ ಆತ್ಮದಲ್ಲಿ ಜೀವವುಂಟು, ಹೀಗೆ ನನ್ನನ್ನು ನೀನು ಸ್ವಸ್ಥಮಾಡಿ ಬದುಕುವಂತೆ ಮಾಡಿದಿ.

ಯೆಶಾಯ 38 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी