ಐಗುಪ್ತದ ಮಗಳು ನಾಚಿಕೆಪಡುವಳು, ಉತ್ತರದ ಜನರ ಕೈಯಲ್ಲಿ ಒಪ್ಪಿಸಲ್ಪಡುವಳು.
22ಅದರ ಶಬ್ದವು ಸರ್ಪದಂತೆ ಹೊರಡುವದು; ಅವರು ದಂಡಿನ ಸಂಗಡ ಸಂಚರಿಸಿ ಕಟ್ಟಿಗೆ ಕಡಿಯುವವರ ಹಾಗೆ ಕೊಡಲಿಗಳ ಸಂಗಡ ಅದಕ್ಕೆ ವಿರೋಧವಾಗಿ ಬರುವರು.
23ಆದರೆ ಅಡವಿ ಯನ್ನು ಅದು ಶೋಧಿಸ ಕೂಡದ್ದಾಗಿದ್ದರೂ ಕಡಿದು ಹಾಕುವರೆಂದು ಕರ್ತನು ಅನ್ನುತ್ತಾನೆ; ಅವರು ಮಿಡಿತೆ ಗಳಿಗಿಂತ ಹೆಚ್ಚಾಗಿ ಲೆಕ್ಕವಿಲ್ಲದೆ ಇದ್ದಾರೆ.
24ಐಗುಪ್ತದ ಮಗಳು ನಾಚಿಕೆಪಡುವಳು, ಉತ್ತರದ ಜನರ ಕೈಯಲ್ಲಿ ಒಪ್ಪಿಸಲ್ಪಡುವಳು.
25ಇಸ್ರಾಯೇಲಿನ ದೇವರಾದ ಸೈನ್ಯ ಗಳ ಕರ್ತನು ಹೇಳುವದೇನಂದರೆ--ಇಗೋ, ನಾನು ನೋಡುವ ಸಮೂಹವನ್ನೂ ಫರೋಹನನ್ನೂ ಐಗುಪ್ತ ವನ್ನೂ ಅದರ ದೇವರುಗಳನ್ನೂ ಅದರ ಅರಸರನ್ನೂ ಅಂತೂ ಫರೋಹನನ್ನೂ ಅವನಲ್ಲಿ ನಂಬಿಕೆಯಿಡುವ ಎಲ್ಲರನ್ನೂ ದಂಡಿಸುತ್ತೇನೆ;
26ಅವರ ಪ್ರಾಣವನ್ನು ಹುಡುಕುವವರ ಕೈಯಲ್ಲಿಯೂ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿಯೂ ಅವನ ಸೇವಕರ ಕೈಯಲ್ಲಿಯೂ ಅವರನ್ನು ನಾನು ಒಪ್ಪಿಸುತ್ತೇನೆ. ಅದರ ತರುವಾಯ ಅದು ಪೂರ್ವದ ಕಾಲಗಳಂತೆ ನಿವಾಸ ವಾಗುವದೆಂದು ಕರ್ತನು ಅನ್ನುತ್ತಾನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ