ಪಶುಗಳಿದ್ದ ಡೇರೆಗಳನ್ನು ಹೊಡೆದು ಕುರಿಗಳನ್ನೂ ಒಂಟೆಗಳನ್ನೂ ಬಹಳವಾಗಿ ತೆಗೆದುಕೊಂಡು ಯೆರೂ ಸಲೇಮಿಗೆ ತಿರುಗಿದರು.
13ಆಗ ಆಸನೂ ಅವನ ಸಂಗಡ ಇದ್ದ ಜನರೂ ಅವರನ್ನು ಗೆರಾರಿನ ವರೆಗೂ ಹಿಂದಟ್ಟಿದರು. ಕೂಷಿಯರು ತಮಗೆ ತ್ರಾಣವಿಲ್ಲದ ಹಾಗೆ ಸೋತುಹೋದರು. ಅವರು ಕರ್ತನ ಮುಂದೆಯೂ ಆತನ ಸೈನ್ಯದ ಮುಂದೆಯೂ ನಾಶ ವಾದರು. ಯೆಹೂದದವರು ಬಹು ಕೊಳ್ಳೆಯನ್ನು ಒಯ್ದರು.
14ಅವರು ಗೆರಾರಿನ ಸುತ್ತಲಿರುವ ಸಮಸ್ತ ಪಟ್ಟಣಗಳನ್ನು ಹೊಡೆದರು. ಕರ್ತನ ಭಯವು ಅವರ ಮೇಲೆ ಬಂತು. ಆ ಪಟ್ಟಣಗಳಲ್ಲಿ ಬಹು ಕೊಳ್ಳೆ ಇದ್ದದ್ದರಿಂದ ಇವುಗಳನ್ನೆಲ್ಲಾ ಕೊಳ್ಳೆಮಾಡಿದರು.
15ಪಶುಗಳಿದ್ದ ಡೇರೆಗಳನ್ನು ಹೊಡೆದು ಕುರಿಗಳನ್ನೂ ಒಂಟೆಗಳನ್ನೂ ಬಹಳವಾಗಿ ತೆಗೆದುಕೊಂಡು ಯೆರೂ ಸಲೇಮಿಗೆ ತಿರುಗಿದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ