೨ ಅರಸುಗಳು 15:32

ಇಸ್ರಾಯೇಲಿನ ಅರಸನಾದಂಥ, ರೆಮಲ್ಯನ ಮಗನಾದ, ಪೆಕಹನ ಆಳ್ವಿಕೆಯ ಎರಡನೇ ವರುಷದಲ್ಲಿ ಯೆಹೂದದ ಅರಸನಾದಂಥ, ಉಜ್ಜೀಯನ ಮಗ ನಾದ, ಯೋತಾಮನು ಆಳಲು ಆರಂಭಿಸಿದನು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 15

30ಇದಲ್ಲದೆ ಉಜ್ಜೀಯನ ಮಗ ನಾದ ಯೋತಾಮನ ಇಪ್ಪತ್ತನೇ ವರುಷದಲ್ಲಿ ಏಲನ ಮಗನಾದ ಹೋಶೆಯನು ರೆಮಲ್ಯನ ಮಗನಾದ ಪೆಕಹನ ಮೇಲೆ ಒಳಸಂಚು ಮಾಡಿ ಅವನನ್ನು ಸಂಹರಿಸಿ ಅವನಿಗೆ ಬದಲಾಗಿ ಅರಸನಾದನು.

31ಇಗೋ, ಪೆಕಹನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.

32ಇಸ್ರಾಯೇಲಿನ ಅರಸನಾದಂಥ, ರೆಮಲ್ಯನ ಮಗನಾದ, ಪೆಕಹನ ಆಳ್ವಿಕೆಯ ಎರಡನೇ ವರುಷದಲ್ಲಿ ಯೆಹೂದದ ಅರಸನಾದಂಥ, ಉಜ್ಜೀಯನ ಮಗ ನಾದ, ಯೋತಾಮನು ಆಳಲು ಆರಂಭಿಸಿದನು.

33ಅವನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಹದಿನಾರು ವರುಷ ಆಳಿದನು. ಅವನ ತಾಯಿಯು ಚಾದೋಕನ ಮಗಳಾ ಗಿದ್ದ ಯೆರೂಷಳು.

34ಅವನು ತನ್ನ ತಂದೆಯಾದ ಉಜ್ಜೀಯನು ಮಾಡಿದ ಪ್ರಕಾರವೇ ಮಾಡಿ ಕರ್ತನ ಸಮ್ಮುಖದಲ್ಲಿ ಒಳ್ಳೆಯದಾದದ್ದನ್ನು ಮಾಡಿದನು.

೨ ಅರಸುಗಳು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी