ಯಾಜಕಕಾಂಡ 14:46

ಇದಲ್ಲದೆ ಆ ಮನೆಯು ಮುಚ್ಚಲ್ಪಟ್ಟ ಕಾಲದಲ್ಲೆಲ್ಲಾ ಅದರೊಳಗೆ ಹೋಗುವವನು ಸಾಯಂಕಾಲದ ವರೆಗೆ ಅಶುದ್ಧ ನಾಗಿರುವನು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 14

44ಯಾಜಕನು ಬಂದು ನೋಡ ಬೇಕು. ಆಗ ಇಗೋ, ವ್ಯಾಧಿಯು ಮನೆಯಲ್ಲಿ ಹರಡಿ ಕೊಂಡಿದ್ದರೆ ಆ ಮನೆಯಲ್ಲಿ ಅದೊಂದು ಪೀಡಿ ಸುವ ಕುಷ್ಠವಾಗಿರುವದು; ಅದು ಅಶುದ್ಧವಾದದ್ದು.

45ಅವನು ಆ ಮನೆಯನ್ನು ಕೆಡವಿಹಾಕಿ ಅದರ ಕಲ್ಲು ಗಳನ್ನೂ ಮರಗಳನ್ನೂ ಆ ಮನೆಯ ಎಲ್ಲಾ ಧೂಳನ್ನೂ ತೆಗೆದು ಅವುಗಳನ್ನು ಪಟ್ಟಣದ ಹೊರಗೆ ಅಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.

46ಇದಲ್ಲದೆ ಆ ಮನೆಯು ಮುಚ್ಚಲ್ಪಟ್ಟ ಕಾಲದಲ್ಲೆಲ್ಲಾ ಅದರೊಳಗೆ ಹೋಗುವವನು ಸಾಯಂಕಾಲದ ವರೆಗೆ ಅಶುದ್ಧ ನಾಗಿರುವನು.

47ಆ ಮನೆಯೊಳಗೆ ಮಲಗಿಕೊಳ್ಳುವ ವನೂ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು, ಅಲ್ಲದೆ ಆ ಮನೆಯೊಳಗೆ ತಿನ್ನುವವನೂ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು.

48ಆದರೆ ಯಾಜಕನು ಒಳಗೆ ಬಂದು ಅದನ್ನು ನೋಡಿದಾಗ ಇಗೋ, ಗಿಲಾವು ಮಾಡಿದ ನಂತರ ಆ ಮನೆಯಲ್ಲಿ ಆ ವ್ಯಾಧಿಯು ಹರಡಿಕೊಂಡಿರದಿದ್ದರೆ ಆ ಮನೆಯು ಶುದ್ಧವೆಂದು ಯಾಜಕನು ನಿರ್ಣಯಿಸ ಬೇಕು. ಆ ವ್ಯಾಧಿಯು ಸ್ವಸ್ಥವಾಯಿತು.

ಯಾಜಕಕಾಂಡ 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी