ಅಪೊಸ್ತಲರ ಕೃತ್ಯಗಳು 28:20

ಈ ಕಾರಣ ದಿಂದಲೇ ನಿಮ್ಮನ್ನು ನೋಡುವದಕ್ಕೂ ನಿಮ್ಮೊಂದಿಗೆ ಮಾತನಾಡುವದಕ್ಕೂ ನಾನು ನಿಮ್ಮನ್ನು ಕರೆಯಿಸಿದೆನು; ಇಸ್ರಾಯೇಲ್ಯರ ನಿರೀಕ್ಷೆಯ ನಿಮಿತ್ತವಾಗಿ ನಾನು ಈ ಸರಪಣಿಯಿಂದ ಕಟ್ಟಲ್ಪಟ್ಟಿದ್ದೇನೆ ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 28

18ಅವರು ನನ್ನನ್ನು ಪರೀಕ್ಷಿಸಿ ನನ್ನಲ್ಲಿ ಮರಣದಂಡನೆಗೆ ಕಾರಣವೇನೂ ಇಲ್ಲದ್ದರಿಂದ ನನ್ನನ್ನು ಬಿಡಿಸಬೇಕೆಂದಿ ದ್ದರು.

19ಆದರೆ ಯೆಹೂದ್ಯರು ಅದಕ್ಕೆ ವಿರೋಧವಾಗಿ ಮಾತನಾಡಿದಾಗ ಕೈಸರನಿಗೆ ಹೇಳಿಕೊಳ್ಳುವಂತೆ ನಾನು ಒತ್ತಾಯ ಮಾಡಲ್ಪಟ್ಟೆನು; ಆದರೆ ನನ್ನ ಸ್ವದೇಶದವರ ಮೇಲೆ ತಪ್ಪು ಹೊರಿಸುವದಕ್ಕಾಗಿ ಅಲ್ಲ.

20ಈ ಕಾರಣ ದಿಂದಲೇ ನಿಮ್ಮನ್ನು ನೋಡುವದಕ್ಕೂ ನಿಮ್ಮೊಂದಿಗೆ ಮಾತನಾಡುವದಕ್ಕೂ ನಾನು ನಿಮ್ಮನ್ನು ಕರೆಯಿಸಿದೆನು; ಇಸ್ರಾಯೇಲ್ಯರ ನಿರೀಕ್ಷೆಯ ನಿಮಿತ್ತವಾಗಿ ನಾನು ಈ ಸರಪಣಿಯಿಂದ ಕಟ್ಟಲ್ಪಟ್ಟಿದ್ದೇನೆ ಎಂದು ಹೇಳಿದನು.

21ಆಗ ಅವರು ಅವನಿಗೆ--ನಿನ್ನ ವಿಷಯವಾಗಿ ಯೂದಾಯದಿಂದ ನಮಗೆ ಯಾವ ಪತ್ರಗಳು ಬಂದಿಲ್ಲ, ಇಲ್ಲವೆ ಇಲ್ಲಿ ಬಂದ ಸಹೋದರರಲ್ಲಿ ಯಾವನೂ ನಿನ್ನ ವಿಷಯವಾಗಿ ಕೆಟ್ಟದ್ದೇನೂ ತೋರಿಸ ಲಿಲ್ಲ ಮತ್ತು ಹೇಳಲಿಲ್ಲ.

22ಆದರೆ ನಿನ್ನ ಅಭಿಪ್ರಾಯ ವೇನೆಂದು ನಿನ್ನಿಂದಲೇ ಕೇಳುವದಕ್ಕೆ ನಾವು ಅಪೇಕ್ಷಿಸು ತ್ತೇವೆ; ಎಲ್ಲಾ ಕಡೆಯಲ್ಲಿಯೂ ಈ ಪಂಗಡದ ವಿಷಯ ದಲ್ಲಿ ಜನರು ವಿರುದ್ಧವಾಗಿ ಮಾತನಾಡುತ್ತಾರೆಂಬದು ನಮಗೆ ಗೊತ್ತದೆ ಎಂದು ಹೇಳಿದರು.

ಅಪೊಸ್ತಲರ ಕೃತ್ಯಗಳು 28 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी