ಆದರೆ ನಾನು ಅವನ ಮಗನ ಕೈಯಿಂದ ರಾಜ್ಯವನ್ನು ತಕ್ಕೊಂಡು ಅದರಲ್ಲಿ ಹತ್ತು ಗೋತ್ರಗಳನ್ನು ನಿನಗೆ ಕೊಡುವೆನು.
33ಅವನ ತಂದೆಯಾದ ದಾವೀದನ ಹಾಗೆ ನನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಕೈಕೊಳ್ಳು ವದಕ್ಕೂ ನನ್ನ ದೃಷ್ಟಿಗೆ ಮೆಚ್ಚಿಕೆಯಾದದ್ದನ್ನು ಮಾಡು ವದಕ್ಕೂ ಅವರು ನನ್ನ ಮಾರ್ಗಗಳಲ್ಲಿ ನಡೆಯದೆ ನನ್ನನ್ನು ಬಿಟ್ಟು ಚೀದೋನ್ಯರ ದೇವತೆಯಾದ ಅಷ್ಟೋ ರೆತನ್ನೂ ಮೋವಾಬ್ಯರ ದೇವರಾದ ಕೆಮೋಷನ್ನೂ ಅಮ್ಮೋನನ ಮಕ್ಕಳ ದೇವರಾದ ಮಿಲ್ಕೋಮನ್ನೂ ಆರಾಧಿಸಿದ್ದಾರೆ.
34ಆದರೂ ನನ್ನ ಆಜ್ಞೆಗಳನ್ನೂ ಕಟ್ಟಳೆ ಗಳನ್ನೂ ಕೈಕೊಂಡದ್ದರಿಂದ ನಾನು ಆದು ತೆಗೆದು ಕೊಂಡ ನನ್ನ ಸೇವಕನಾದ ದಾವೀದನಿಗೋಸ್ಕರ ನಾನು ಅವನ ಕೈಯಿಂದ ರಾಜ್ಯವನ್ನೆಲ್ಲಾ ತೆಗೆದು ಕೊಳ್ಳದೆ ಅವನ ಜೀವಮಾನದ ಸಕಲ ದಿವಸಗಳಲ್ಲಿ ಅವನನ್ನು ಪ್ರಭುವಾಗಿ ಇರಿಸುವೆನು.
35ಆದರೆ ನಾನು ಅವನ ಮಗನ ಕೈಯಿಂದ ರಾಜ್ಯವನ್ನು ತಕ್ಕೊಂಡು ಅದರಲ್ಲಿ ಹತ್ತು ಗೋತ್ರಗಳನ್ನು ನಿನಗೆ ಕೊಡುವೆನು.
36ಅಲ್ಲಿ ನನ್ನ ಹೆಸರನ್ನಿಡಲು ನಾನು ಆದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ನನ್ನ ಮುಂದೆ ನನ್ನ ಸೇವಕನಾದ ದಾವೀದನಿಗೆ ಯಾವಾಗಲೂ ಬೆಳಕು ಉಂಟಾಗುವ ಹಾಗೆ ಅವನ ಮಗನಿಗೆ ಒಂದು ಗೋತ್ರ ವನ್ನು ಕೊಡುವೆನು.
37ಇದಲ್ಲದೆ ನಾನು ನಿನ್ನನ್ನು ತಕ್ಕೊಂಡು ನೀನು ನಿನ್ನ ಪ್ರಾಣವು ಇಚ್ಚೈಸುವದೆಲ್ಲವನ್ನು ಆಳುವಂತೆ ಮಾಡಿ ಇಸ್ರಾಯೇಲಿನ ಮೇಲೆ ಅರಸನಾ ಗಿರುವಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ