ಎಸ್ತೇರಳು 6:4

ಆಗ ಅರಸನು--ಅಂಗಳದಲ್ಲಿ ಯಾರು ಅಂದನು. ಆಗ ಹಾಮಾನನು ಮೊರ್ದೆಕೈಗೋಸ್ಕರ ಸಿದ್ಧಮಾಡಿದ ಗಲ್ಲಿನ ಮರದಲ್ಲಿ ಅವನನ್ನು ಹಾಕುವ ಹಾಗೆ ಅರಸನ ಸಂಗಡ ಮಾತನಾಡಲು ಅರಮನೆಯ ಹೊರಗಿನ ಅಂಗಳದಲ್ಲಿ ಬಂದಿದ್ದನು.

ಸಂದರ್ಭದೊಂದಿಗೆ ಓದಿ · ಎಸ್ತೇರಳು 6

2ಅವು ಅರಸನ ಮುಂದೆ ಓದಲ್ಪಟ್ಟಾಗ ದ್ವಾರಪಾಲಕರಾಗಿದ್ದ ಅರಸನ ಮನೆವಾರ್ತೆಯವರಲ್ಲಿ ಇಬ್ಬರು ಬಿಗೆತಾನನೂ ತೆರೆಷನೂ ಅರಸನಾದ ಅಹಷ್ವೇರೋಷನ ಮೇಲೆ ಕೈಹಾಕಲು ಹುಡುಕುತ್ತಾ ಇದ್ದರೆಂಬುವ ವರ್ತಮಾನ ವನ್ನು ಮೊರ್ದೆಕೈಯು ತಿಳಿಸಿದನೆಂದು ಬರೆಯಲ್ಪಟ್ಟಿದ್ದು ಸಿಕ್ತಿತು.

3ಆಗ ಅರಸನು--ಇದಕ್ಕೋಸ್ಕರ ಮೊರ್ದೆಕೈಗೆ ಏನಾದರೂ ಘನವೂ ಮಹಿಮೆಯೂ ಮಾಡಲ್ಪಟ್ಟವೋ ಅಂದನು. ಅವನಿಗೆ ಮಾಡಿದ್ದು ಏನೂ ಇಲ್ಲವೆಂದೂ ಅರಸನನ್ನು ಸೇವಿಸುವ ಅವನ ಸೇವಕರು ಹೇಳಿದರು.

4ಆಗ ಅರಸನು--ಅಂಗಳದಲ್ಲಿ ಯಾರು ಅಂದನು. ಆಗ ಹಾಮಾನನು ಮೊರ್ದೆಕೈಗೋಸ್ಕರ ಸಿದ್ಧಮಾಡಿದ ಗಲ್ಲಿನ ಮರದಲ್ಲಿ ಅವನನ್ನು ಹಾಕುವ ಹಾಗೆ ಅರಸನ ಸಂಗಡ ಮಾತನಾಡಲು ಅರಮನೆಯ ಹೊರಗಿನ ಅಂಗಳದಲ್ಲಿ ಬಂದಿದ್ದನು.

5ಅರಸನ ಸೇವಕರು ಅವ ನಿಗೆ--ಇಗೋ, ಹಾಮಾನನು ಅಂಗಳದಲ್ಲಿ ನಿಂತಿ ದ್ದಾನೆ ಅಂದರು. ಅರಸನು--ಅವನು ಒಳಗೆ ಬರಲಿ ಅಂದನು.

6ಹಾಮಾನನು ಒಳಕ್ಕೆ ಬಂದಾಗ ಅರಸನು ಅವನಿಗೆ--ಅರಸನು ಇಷ್ಟಪಟ್ಟು ಘನಪಡಿಸಬೇಕೆಂದಿ ರುವ ಮನುಷ್ಯನಿಗೆ ಮಾಡಬೇಕಾದದ್ದೇನು ಅಂದನು. ಆಗ ಹಾಮಾನನು ತನ್ನ ಹೃದಯದಲ್ಲಿ--ಅರಸನು ನನಗಿಂತ ಹೆಚ್ಚಾಗಿ ಇನ್ನಾರನ್ನು ಘನಪಡಿಸಬೇಕೆಂದಿ ರುವನು ಎಂದು ಅಂದುಕೊಂಡನು.

ಎಸ್ತೇರಳು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी