ಆಕೆಯು ತನ್ನ ಸಂಗಡ ಬರಲು ದೃಢವಾದ ಮನಸ್ಸು ಮಾಡಿಕೊಂಡಿದ್ದಾಳೆಂದು ಕಂಡಾಗ ಅವಳ ಸಂಗಡ ಮಾತನಾಡದೆ ಇದ್ದಳು.
16ಅದಕ್ಕೆ ರೂತಳು ನಿನ್ನನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಮಾಡಬೇಡ; ಯಾಕಂದರೆ ನೀನು ಎಲ್ಲಿ ಹೋಗುವಿಯೋ ನಾನು ಅಲ್ಲಿಗೆ ಬರುವೆನು; ನೀನು ಎಲ್ಲಿ ಇಳುಕೊಳ್ಳುವಿಯೋ ನಾನು ಅಲ್ಲಿ ಇಳು ಕೊಳ್ಳುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.
17ನೀನು ಎಲ್ಲಿ ಸಾಯುತ್ತೀಯೋ ಅಲ್ಲಿಯೇ ನಾನು ಸತ್ತುಹೂಣಲ್ಪಡುವೆನು. ಮರಣವು ಮಾತ್ರ ನಮ್ಮನ್ನು ಅಗಲಿಸದ ಹೊರತು ನಾನು ಅಗಲಿದರೆ ಕರ್ತನು ನನಗೆ ಬೇಕಾದದ್ದನ್ನು ಮಾಡಲಿ ಅಂದಳು.
18ಆಕೆಯು ತನ್ನ ಸಂಗಡ ಬರಲು ದೃಢವಾದ ಮನಸ್ಸು ಮಾಡಿಕೊಂಡಿದ್ದಾಳೆಂದು ಕಂಡಾಗ ಅವಳ ಸಂಗಡ ಮಾತನಾಡದೆ ಇದ್ದಳು.
19ಹಾಗೆಯೇ ಇಬ್ಬರೂ ಬೇತ್ಲೆಹೇಮಿನವರೆಗೂ ಹೋದರು. ಅವರು ಬೇತ್ಲೆಹೇಮಿನಲ್ಲಿ ಪ್ರವೇಶಿಸುವಾಗ ಆ ಪಟ್ಟಣವೆಲ್ಲಾ ಇವರಿಗೋಸ್ಕರ ಗದ್ದಲವಾಗಿ ಅವರು ಇವಳು ನೊವೊ ಮಿಯೋ? ಅಂದರು.
20ಆಗ ಆಕೆಯು ಅವರಿಗೆ ನನ್ನನ್ನು ನೊವೊಮಿ ಎಂದು ಕರೆಯಬೇಡಿರಿ; ಮಾರಾ ಎಂದು ಕರೆಯಿರಿ; ಯಾಕಂದರೆ ಸರ್ವಶಕ್ತನು ನನ್ನನ್ನು ಬಹು ದುಃಖದಲ್ಲಿ ನಡಿಸಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ