ಯೆಹೋಶುವ 6:3

ಯುದ್ಧ ಸನ್ನದ್ಧರಾದ ನೀವೆಲ್ಲರೂ ಪಟ್ಟಣ ವನ್ನು ಸುತ್ತಬೇಕು, ಅಂದರೆ ಒಂದು ಸಾರಿ ಪಟ್ಟಣದ ಸುತ್ತಲೂ ಹೋಗಬೇಕು. ಈ ಪ್ರಕಾರ ಆರು ದಿವಸಗಳು ಮಾಡಬೇಕು.

ಸಂದರ್ಭದೊಂದಿಗೆ ಓದಿ · ಯೆಹೋಶುವ 6

1ಆಗ ಇಸ್ರಾಯೇಲ್‌ ಮಕ್ಕಳ ನಿಮಿತ್ತವಾಗಿ ಒಬ್ಬರೂ ಹೊರಗೆ ಬಾರದ ಹಾಗೆಯೂ ಒಳಗೆ ಹೋಗದ ಹಾಗೆಯೂ ಯೆರಿಕೋವು ಭದ್ರ ವಾಗಿ ಮುಚ್ಚಲ್ಪಟ್ಟಿತು.

2ಆಗ ಕರ್ತನು ಯೆಹೋಶುವ ನಿಗೆ--ನೋಡು, ಯೆರಿಕೋವನ್ನೂ ಅದರ ಅರಸನನ್ನೂ ಬಲವುಳ್ಳ ಪರಾಕ್ರಮಿಗಳನ್ನೂ ನಿನ್ನ ಕೈಯಲ್ಲಿ ಒಪ್ಪಿಸಿ ಕೊಟ್ಟಿದ್ದೇನೆ.

3ಯುದ್ಧ ಸನ್ನದ್ಧರಾದ ನೀವೆಲ್ಲರೂ ಪಟ್ಟಣ ವನ್ನು ಸುತ್ತಬೇಕು, ಅಂದರೆ ಒಂದು ಸಾರಿ ಪಟ್ಟಣದ ಸುತ್ತಲೂ ಹೋಗಬೇಕು. ಈ ಪ್ರಕಾರ ಆರು ದಿವಸಗಳು ಮಾಡಬೇಕು.

4ಏಳು ಮಂದಿ ಯಾಜಕರು ಟಗರಿನ ಕೊಂಬುಗಳ ಏಳು ತುತೂರಿಗಳನ್ನು ಹಿಡುಕೊಂಡು ಮಂಜೂಷದ ಮುಂದೆ ಹೋಗಬೇಕು. ಆದರೆ ಅವರು ಏಳನೇ ದಿನ ಪಟ್ಟಣವನ್ನು ಏಳುಸಾರಿ ಸುತ್ತಬೇಕು. ಯಾಜಕರು ತುತೂರಿಗಳನ್ನು ಊದಬೇಕು.

5ಅವರು ಟಗರಿನ ಕೊಂಬುಗಳ ತುತೂರಿಗಳಿಂದ ದೀರ್ಘ ಧ್ವನಿ ಗೈಯುವಾಗ ನೀವು ಆ ತುತೂರಿಯ ಧ್ವನಿಯನ್ನು ಕೇಳಿದವರಾಗಿ ಜನರೆಲ್ಲರು ಮಹಾ ಆರ್ಭಟವಾಗಿ ಆರ್ಭಟಿಸಬೇಕು; ಆಗ ಆ ಪಟ್ಟಣದ ಗೋಡೆಯು ನೆಲಸಮವಾಗಿ ಬಿದ್ದು ಹೋಗುವದು. ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಹೋಗುವನು ಎಂದು ಹೇಳಿದನು.

ಯೆಹೋಶುವ 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी