ಅವನು ಕರ್ತನನ್ನು ಹುಡುಕಲು ತನ್ನ ಹೃದಯ ವನ್ನು ಸಿದ್ಧಪಡಿಸದೆ ಇದ್ದದ್ದರಿಂದ ಕೆಟ್ಟದ್ದನ್ನು ಮಾಡಿ ದನು.
12ಅವನು ತನ್ನನ್ನು ತಗ್ಗಿಸಿಕೊಂಡಾಗ ಕರ್ತನ ಕೋಪವು ಅವನನ್ನು ಬಿಟ್ಟು ತಿರುಗಿತು; ಆತನು ಪೂರ್ಣವಾಗಿ ನಾಶಮಾಡಲು ಮನಸ್ಸಿಲ್ಲದೆ ಇದ್ದನು; ಯೆಹೂದದಲ್ಲಿ ಕಾರ್ಯಗಳು ಚೆನ್ನಾಗಿ ನಡೆದವು.
13ಅರಸನಾದ ರೆಹಬ್ಬಾಮನು ಯೆರೂಸಲೇಮಿನಲ್ಲಿ ತನ್ನನ್ನು ಬಲಪಡಿಸಿಕೊಂಡು ರಾಜ್ಯವನ್ನು ಆಳಿದನು. ರೆಹಬ್ಬಾಮನು ಆಳಲು ಆರಂಭಿಸಿದಾಗ ನಾಲ್ವತ್ತೊಂದು ವರುಷದವನಾಗಿದ್ದು ಅಲ್ಲಿ ತನ್ನ ನಾಮವನ್ನು ಇರಿಸಲು ಇಸ್ರಾಯೇಲಿನ ಸಮಸ್ತ ಗೋತ್ರಗಳಲ್ಲಿ ಕರ್ತನು ಆದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ಹದಿನೇಳು ವರುಷ ಆಳಿದನು. ಅವನ ತಾಯಿಯ ಹೆಸರು ನಯಮಾ; ಅವಳು ಅಮ್ಮೋನ್ಯಳಾಗಿದ್ದಳು.
14ಅವನು ಕರ್ತನನ್ನು ಹುಡುಕಲು ತನ್ನ ಹೃದಯ ವನ್ನು ಸಿದ್ಧಪಡಿಸದೆ ಇದ್ದದ್ದರಿಂದ ಕೆಟ್ಟದ್ದನ್ನು ಮಾಡಿ ದನು.
15ರೆಹಬ್ಬಾಮನ ಕ್ರಿಯೆಗಳು ಮೊದಲನೆಯವು ಗಳೂ ಕಡೆಯವುಗಳೂ ಪ್ರವಾದಿಯಾದ ಶೆಮಾಯನ ಪುಸ್ತಕದಲ್ಲಿಯೂ ವಂಶಾವಳಿಗಳನ್ನು ಕುರಿತು ಬರೆದ ದರ್ಶಿಯಾದ ಇದ್ದೋನ ಪುಸ್ತಕದಲ್ಲಿಯೂ ಬರೆಯ ಲ್ಪಟ್ಟವಲ್ಲವೇ? ಇದಲ್ಲದೆ ರೆಹಬ್ಬಾಮನಿಗೂ ಯಾರೊ ಬ್ಬಾಮನಿಗೂ ಯಾವಾಗಲೂ ಯುದ್ಧಉಂಟಾಗಿತ್ತು.
16ರೆಹಬ್ಬಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿ ದಾವೀದನ ಪಟ್ಟಣದಲ್ಲಿ ಹೂಣಲ್ಪಟ್ಟನು; ಅವನ ಮಗ ನಾದ ಅಬೀಯನು ಅವನಿಗೆ ಬದಲಾಗಿ ಆಳಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ