ಯೆಹೋಶುವ 23:2

ಅವನು ಸಮಸ್ತ ಇಸ್ರಾಯೇಲ್ಯರನ್ನೂ ಅವರ ಹಿರಿಯರನ್ನೂ ಮುಖ್ಯ ಸ್ಥರನ್ನೂ ನ್ಯಾಯಾಧಿಪತಿಗಳನ್ನೂ ಅಧಿಕಾರಿಗಳನ್ನೂ ಕರಿಸಿ ಅವರಿಗೆ--ನಾನು ವೃದ್ಧನಾಗಿ ದಿನಗಳು ತುಂಬಿ ದವನಾಗಿದ್ದೇನೆ.

ಸಂದರ್ಭದೊಂದಿಗೆ ಓದಿ · ಯೆಹೋಶುವ 23

1ಕರ್ತನು ಇಸ್ರಾಯೇಲನ್ನು ಸುತ್ತಲಿರುವ ಎಲ್ಲಾ ಶತ್ರುಗಳಿಂದ ತಪ್ಪಿಸಿ ವಿಶ್ರಾಂತಿ ಕೊಟ್ಟ ಬಹಳ ದಿನಗಳ ತರುವಾಯ ಯೆಹೋಶುವನ ದಿನಗಳು ತುಂಬಿ ವೃದ್ಧನಾದನು.

2ಅವನು ಸಮಸ್ತ ಇಸ್ರಾಯೇಲ್ಯರನ್ನೂ ಅವರ ಹಿರಿಯರನ್ನೂ ಮುಖ್ಯ ಸ್ಥರನ್ನೂ ನ್ಯಾಯಾಧಿಪತಿಗಳನ್ನೂ ಅಧಿಕಾರಿಗಳನ್ನೂ ಕರಿಸಿ ಅವರಿಗೆ--ನಾನು ವೃದ್ಧನಾಗಿ ದಿನಗಳು ತುಂಬಿ ದವನಾಗಿದ್ದೇನೆ.

3ನಿಮ್ಮ ದೇವರಾದ ಕರ್ತನು ನಿಮ ಗೋಸ್ಕರ ಈ ಸಕಲ ಜನಾಂಗಗಳಿಗೆ ಮಾಡಿ ದ್ದೆಲ್ಲವನ್ನೂ ನೋಡಿದ್ದೀರಿ; ನಿಮಗೋಸ್ಕರವಾಗಿ ಯುದ್ಧ ಮಾಡಿದಾತನು ನಿಮ್ಮ ದೇವರಾದ ಕರ್ತನು.

4ಇಗೋ, ನಾನು ಯೊರ್ದನ್‌ ಮೊದಲುಗೊಂಡು ಪಶ್ಚಿಮಕ್ಕಿರುವ ದೊಡ್ಡ ಸಮುದ್ರದ ವರೆಗೂ ಜನಾಂಗಗಳನ್ನು ಕಡಿದು ಉಳಿದ ಸಕಲ ಜನಾಂಗಗಳ ದೇಶಗಳನ್ನು ನಿಮ್ಮ ಗೋತ್ರಗಳಿಗೆ ಚೀಟು ಹಾಕಿ ನಿಮಗೆ ಹಂಚಿಕೊಟ್ಟೆನು.

ಯೆಹೋಶುವ 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी