ನ್ಯಾಯಸ್ಥಾಪಕರು 3:29

ಮೋವಾಬ್ಯರಲ್ಲಿ ಹೆಚ್ಚು ಕಡಿಮೆ ಹತ್ತು ಸಾವಿರ ಜನರನ್ನು ಹತಮಾಡಿದರು. ಅವರೆಲ್ಲರು ಕೊಬ್ಬಿನವರೂ ಪರಾಕ್ರಮಿಗಳೂ ಆಗಿ ದ್ದರು. ಅವರಲ್ಲಿ ಒಬ್ಬನಾದರೂ ತಪ್ಪಿಹೋದದ್ದಿಲ್ಲ.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 3

27ಅವನು ಅಲ್ಲಿ ಬಂದಾಗ ಎಫ್ರಾಯಾಮಿನ ಬೆಟ್ಟದಲ್ಲಿ ತುತೂರಿಯನ್ನು ಊದಿದನು. ಆಗ ಇಸ್ರಾಯೇಲ್‌ ಮಕ್ಕಳು ಅವನ ಸಂಗಡ ಬೆಟ್ಟದಿಂದ ಇಳಿದರು; ಅವನು ಇವರ ಮುಂದೆ ನಡೆದು

28ಅವರ ಸಂಗಡ--ನೀವು ನನ್ನ ಹಿಂದೆ ಬನ್ನಿರಿ; ಕರ್ತನು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟನು ಎಂದು ಅಂದನು. ಅವರು ಅವನ ಹಿಂದೆ ಬಂದು ಮೋವಾಬ್ಯ ರಿಗೆ ಎದುರಾದ ಯೊರ್ದನಿನ ರೇವುಗಳನ್ನು ಹಿಡಿದು ಒಬ್ಬರನ್ನಾದರೂ ದಾಟಗೊಡದೆ

29ಮೋವಾಬ್ಯರಲ್ಲಿ ಹೆಚ್ಚು ಕಡಿಮೆ ಹತ್ತು ಸಾವಿರ ಜನರನ್ನು ಹತಮಾಡಿದರು. ಅವರೆಲ್ಲರು ಕೊಬ್ಬಿನವರೂ ಪರಾಕ್ರಮಿಗಳೂ ಆಗಿ ದ್ದರು. ಅವರಲ್ಲಿ ಒಬ್ಬನಾದರೂ ತಪ್ಪಿಹೋದದ್ದಿಲ್ಲ.

30ಹೀಗೆ ಆ ದಿನದಲ್ಲಿ ಮೋವಾಬ್‌ ಇಸ್ರಾಯೇಲಿನ ಕೈಕೆಳಗೆ ತಗ್ಗಿಸಲ್ಪಟ್ಟಿತು; ದೇಶವು ಎಂಭತ್ತು ವರುಷ ವಿಶ್ರಾಂತಿಗೊಂಡಿತು.

31ಅವನ ತರುವಾಯ ಅನಾತನ ಮಗನಾದ ಶಮ್ಗರನು ಎದ್ದನು. ಅವನು ಫಿಲಿಷ್ಟಿಯರಲ್ಲಿ ಆರು ನೂರು ಮನುಷ್ಯರನ್ನು ಎತ್ತಿನ ಮುಳ್ಳುಗೋಲಿನಿಂದ ಹತಮಾಡಿದನು. ಅವನು ಸಹ ಇಸ್ರಾಯೇಲ್ಯರನ್ನು ರಕ್ಷಿಸಿದನು.

ನ್ಯಾಯಸ್ಥಾಪಕರು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी