ನ್ಯಾಯಸ್ಥಾಪಕರು 17:1

ಆದರೆ ಎಫ್ರಾಯಾಮ್‌ ಬೆಟ್ಟದಲ್ಲಿ ವಿಾಕಎಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 17

1ಆದರೆ ಎಫ್ರಾಯಾಮ್‌ ಬೆಟ್ಟದಲ್ಲಿ ವಿಾಕಎಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು.

2ಅವನು ತನ್ನ ತಾಯಿಗೆ--ನಿನ್ನ ಬಳಿಯಿಂದ ಸಾವಿರದ ನೂರು ರೂಪಾಯಿಗಳಷ್ಟು ಬೆಳ್ಳಿಯು ತೆಗೆಯಲ್ಪಟ್ಟಾಗ ನೀನು ಆ ಬೆಳ್ಳಿಯನ್ನು ಕುರಿತು ಶಪಿಸಿ ನನ್ನ ಕಿವಿಗಳಲ್ಲಿ ಮಾತನಾಡಿದಿಯಲ್ಲಾ? ಇಗೋ, ಆ ಬೆಳ್ಳಿಯು ನನ್ನ ಬಳಿಯಲ್ಲಿ ಅದೆ; ನಾನು ಅದನ್ನು ತಕ್ಕೊಂಡೆನು ಅಂದನು. ಅದಕ್ಕೆ ಅವನ ತಾಯಿ--ನನ್ನ ಮಗನೇ, ನೀನು ಕರ್ತನಿಂದ ಆಶೀರ್ವದಿಸಲ್ಪಡುವಿ ಅಂದಳು.

3ಅವನು ಆ ಸಾವಿರದ ನೂರು ರೂಪಾಯಿಗಳಷ್ಟು ಬೆಳ್ಳಿಯನ್ನು ತನ್ನ ತಾಯಿಗೆ ತಿರಿಗಿ ಕೊಟ್ಟಾಗ ಅವನ ತಾಯಿ--ನನ್ನ ಮಗನ ನಿಮಿತ್ತ ಕೆತ್ತಿದ ವಿಗ್ರಹವನ್ನೂ ಎರಕದ ವಿಗ್ರಹವನ್ನೂ ಮಾಡುವದಕ್ಕೆ ನಾನು ನನ್ನ ಕೈಯಲ್ಲಿದ್ದ ಈ ಬೆಳ್ಳಿಯನ್ನು ಕರ್ತನಿಗೆ ಸಂಪೂರ್ಣವಾಗಿ ಪ್ರತಿಷ್ಠಿಸಿದೆನು; ಆದದರಿಂದ ನಾನು ಅದನ್ನು ನಿನಗೆ ತಿರಿಗಿ ಕೊಡುವೆನು ಅಂದಳು.

ನ್ಯಾಯಸ್ಥಾಪಕರು 17 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी