ಸತ್ಯದ ವಾಕ್ಯವನ್ನು ನನ್ನ ಬಾಯಿಂದ ಪೂರ್ಣವಾಗಿ ತೆಗೆದುಹಾಕಬೇಡ; ನಿನ್ನ ನ್ಯಾಯವಿಧಿಗಳನ್ನು ನಿರೀಕ್ಷಿಸಿದ್ದೇನೆ,
41ಕರ್ತನೇ, ನಿನ್ನ ವಾಕ್ಯದ ಪ್ರಕಾರ ನಿನ್ನ ಕರು ಣೆಯೂ ರಕ್ಷಣೆಯೂ ನನಗೆ ದೊರಕಲಿ.
42ಆಗ ನನ್ನನ್ನು ನಿಂದಿಸುವವನಿಗೆ ಉತ್ತರ ಕೊಡುವೆನು; ನಿನ್ನ ವಾಕ್ಯದಲ್ಲಿ ಭರವಸವಿಟ್ಟದ್ದೇನೆ.
43ಸತ್ಯದ ವಾಕ್ಯವನ್ನು ನನ್ನ ಬಾಯಿಂದ ಪೂರ್ಣವಾಗಿ ತೆಗೆದುಹಾಕಬೇಡ; ನಿನ್ನ ನ್ಯಾಯವಿಧಿಗಳನ್ನು ನಿರೀಕ್ಷಿಸಿದ್ದೇನೆ,
44ನಿನ್ನ ನ್ಯಾಯಪ್ರಮಾಣವನ್ನು ಸತತವಾಗಿ ಎಂದೆಂದಿಗೂ ಕೈಕೊಳ್ಳುವೆನು.
45ಸ್ವತಂತ್ರದಲ್ಲಿ ನಡೆದುಕೊಳ್ಳುವೆನು; ನಿನ್ನ ಕಟ್ಟಳೆಗಳನ್ನು ನಾನು ಹುಡುಕುತ್ತೇನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ