ಬಾಷನು ಅದನ್ನು ಕೇಳುತ್ತಲೆ ರಾಮವನ್ನು ಕಟ್ಟಿಸುವದನ್ನು ಬಿಟ್ಟು ತಿರ್ಚ ದಲ್ಲಿ ವಾಸಿಸಿದನು.
19ಇಗೋ, ನಾನು ಬೆಳ್ಳಿ ಬಂಗಾರವನ್ನು ಕಾಣಿಕೆಯಾಗಿ ನಿನ್ನ ಬಳಿಗೆ ಕಳುಹಿಸಿದ್ದೇನೆ. ಇಸ್ರಾಯೇಲಿನ ಅರಸನಾದ ಬಾಷನು ನನ್ನನ್ನು ಬಿಟ್ಟು ಹೋಗುವ ಹಾಗೆ ನೀನು ಬಂದು ಅವನ ಸಂಗಡ ಮಾಡಿದ ನಿನ್ನ ಒಡಂಬಡಿಕೆಯನ್ನು ಮುರಿಯಬೇಕು ಅಂದನು.
20ಹಾಗೆಯೇ ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ ಇಸ್ರಾಯೇಲಿನ ಪಟ್ಟಣಗಳಿಗೆ ವಿರೋಧವಾಗಿ ತನಗುಂಟಾದ ಸೈನ್ಯಗಳ ಅಧಿಪತಿ ಗಳನ್ನು ಕಳುಹಿಸಿ ಇಯ್ಯೋನ್, ದಾನ್, ಆಬೇಲ್ಬೇ ತ್ಮಾಕಾ ಸಮಸ್ತ ಕಿನ್ನೆರೋತ್, ಸಮಸ್ತ ನಫ್ತಾಲಿ ದೇಶವು, ಇವುಗಳನ್ನು ಹೊಡೆದುಬಿಟ್ಟನು.
21ಬಾಷನು ಅದನ್ನು ಕೇಳುತ್ತಲೆ ರಾಮವನ್ನು ಕಟ್ಟಿಸುವದನ್ನು ಬಿಟ್ಟು ತಿರ್ಚ ದಲ್ಲಿ ವಾಸಿಸಿದನು.
22ಆಗ ಅರಸನಾದ ಆಸನು ಯೆಹೂದದೆಲ್ಲೆಲ್ಲಿಯೂ ಸಾರಿದನು; ಒಬ್ಬರೂ ಬಿಡಲ್ಪ ಡಲಿಲ್ಲ; ಆಗ ಅವರು ಬಾಷನು ಕಟ್ಟಿಸಿದ ರಾಮದ ಕಲ್ಲುಗಳನ್ನೂ ಅದರ ಮರಗಳನ್ನೂ ತಕ್ಕೊಂಡು ಹೋದರು. ಅರಸನಾದ ಆಸನು ಅವುಗಳಿಂದ ಬೆನ್ಯಾವಿಾನನ ಗೆಬವನ್ನೂ ಮಿಚ್ಪೆಯನ್ನೂ ಕಟ್ಟಿಸಿದನು.
23ಆಸನ ಮಿಕ್ಕಾದ ಎಲ್ಲಾ ಕ್ರಿಯೆಗಳೂ ಅವನ ಸಮಸ್ತ ಪರಾಕ್ರಮವೂ ಅವನು ಮಾಡಿದ್ದೆಲ್ಲವೂ ಅವನು ಕಟ್ಟಿಸಿದ ಪಟ್ಟಣಗಳೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯ ಲ್ಪಡಲಿಲ್ಲವೋ? ಆದರೆ ತನ್ನ ವೃದ್ದಾಪ್ಯದ ಕಾಲದಲ್ಲಿ ಅವನು ತನ್ನ ಕಾಲುಗಳಲ್ಲಿ ಅಸ್ವಸ್ಥನಾಗಿದ್ದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ