ಇವನು ನಿಮಗೆ--ಹಿಜ್ಕೀಯನು ನಿಮಗೆ ಮೋಸಮಾಡದಿರಲಿ, ಅವನು ನಿಮ್ಮನ್ನು ಬಿಡಿಸಲು ಶಕ್ತನಲ್ಲ.
12ಆದರೆ ರಬ್ಷಾಕೆಯು--ನನ್ನ ಯಜ ಮಾನನು ನಿಮ್ಮ ಸಂಗಡವಾಗಲಿ ನಿಮ್ಮ ಯಜಮಾ ನನ ಸಂಗಡವಾಗಲಿ ಈ ಮಾತುಗಳನ್ನು ಹೇಳುವ ದಕ್ಕೆ ಕಳುಹಿಸಿದನೋ? ತಮ್ಮ ಸ್ವಂತ ಮಲವನ್ನು ತಿಂದು ಸ್ವಂತ ಮೂತ್ರವನ್ನು ಕುಡಿಯಬೇಕೆಂದು ಈ ಗೋಡೆಯ ಮೇಲೆ ಕೂತಿರುವ ಮನುಷ್ಯರ ಸಂಗಡ ಮಾತನಾಡಲು ಅವನು ನನ್ನನ್ನು ಕಳುಹಿಸಲಿಲ್ಲವೋ ಅಂದನು.
13ಆಗ ರಬ್ಷಾಕನು ನಿಂತುಕೊಂಡು ಯೆಹೂ ದ್ಯರ ಭಾಷೆಯಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿದ್ದೇನಂದರೆ--ಅಶ್ಶೂರಿನ ಅರಸನಾದ ಮಹಾ ರಾಜನ ಮಾತುಗಳನ್ನು ಕೇಳಿರಿ.
14ಇವನು ನಿಮಗೆ--ಹಿಜ್ಕೀಯನು ನಿಮಗೆ ಮೋಸಮಾಡದಿರಲಿ, ಅವನು ನಿಮ್ಮನ್ನು ಬಿಡಿಸಲು ಶಕ್ತನಲ್ಲ.
15ಇಲ್ಲವೇ ಕರ್ತನು ನಿಶ್ಚಯವಾಗಿ ನಮ್ಮನ್ನು ತಪ್ಪಿಸುವನು; ಈ ಪಟ್ಟಣವು ಅಶ್ಶೂರದ ಅರಸನ ವಶವಾಗುವದಿಲ್ಲ ಎಂದು ಹೇಳಿ ನೀವು ಕರ್ತನಲ್ಲಿ ಭರವಸೆ ಇಡುವಂತೆ ಮಾಡಿದರೂ;
16ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ; ಅಶ್ಶೂರದ ಅರಸನು ಹೇಳುವದೇನಂದರೆ, ನನ್ನೊಡನೆ ಒಡಂಬಡಿಕೆ ಮಾಡಿಕೊಂಡು ನನ್ನ ಬಳಿಗೆ ಹೊರಗೆ ಬನ್ನಿರಿ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಅಂಜೂರದ ಮರ, ದ್ರಾಕ್ಷಾಲತೆ ಇವುಗಳ ಫಲಗಳನ್ನು ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವಿರಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ