ಆತನ ಒಡಂಬಡಿಕೆಯನ್ನು ಕೈಕೊಂಡು ಆತನ ಕಟ್ಟಳೆಗಳನ್ನು ನೆನಸಿ ಅದರಂತೆ ಮಾಡುವವರಿಗೂ ನಿತ್ಯತ್ವದಿಂದ ನಿತ್ಯತ್ವಕ್ಕೂ ಇರುವದು.
16ಆದಾಗ್ಯೂ ಗಾಳಿಯು ಅದರ ಮೇಲೆ ಬೀಸುತ್ತಲೇ ಅದು ಇಲ್ಲದೆ ಹೋಗುತ್ತದೆ; ಅದರ ಸ್ಥಳವು ಅದನ್ನು ಇನ್ನು ಅರಿಯದು.
17ಆದರೆ ಕರ್ತನ ಕೃಪೆಯು ಆತನಿಗೆ ಭಯಪಡುವವರ ಮೇಲೆಯೂ ಆತನ ನೀತಿಯು ಮಕ್ಕಳ ಮಕ್ಕಳಿಗೂ
18ಆತನ ಒಡಂಬಡಿಕೆಯನ್ನು ಕೈಕೊಂಡು ಆತನ ಕಟ್ಟಳೆಗಳನ್ನು ನೆನಸಿ ಅದರಂತೆ ಮಾಡುವವರಿಗೂ ನಿತ್ಯತ್ವದಿಂದ ನಿತ್ಯತ್ವಕ್ಕೂ ಇರುವದು.
19ಕರ್ತನು ಆಕಾಶಗಳಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನ ರಾಜ್ಯವು ಎಲ್ಲರ ಮೇಲೆ ಆಳುತ್ತದೆ.
20ಆತನ ದೂತರೇ, ಆತನ ಮಾತಿನ ಸ್ವರವನ್ನು ಕೇಳಿ, ಆತನ ಆಜ್ಞೆಗಳನ್ನು ನಡಿಸುವ ಶ್ರೇಷ್ಠರಾದ ಶೂರರೇ,
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ