ಹೋಶೇ 10:13

ನೀವು ದುಷ್ಟತ್ವವನ್ನು ಬಿತ್ತು ಅನ್ಯಾಯವನ್ನು ಕೊಯ್ದಿರಿ. ಸುಳ್ಳಿನ ಫಲವನ್ನು ತಿಂದಿದ್ದೀರಿ; ನಿನ್ನ ಮಾರ್ಗದಲ್ಲಿಯೂ ನಿನ್ನ ಬಲಿಷ್ಠರಾದ ಹಲವರಲ್ಲಿಯೂ ಭರವಸೆಯಿಟ್ಟಿದ್ದೀ.

ಸಂದರ್ಭದೊಂದಿಗೆ ಓದಿ · ಹೋಶೇ 10

11ಎಫ್ರಾ ಯಾಮು ಹತೋಟಿಗೆ ಬಂದು ತೆನೆಹುಲ್ಲನ್ನು ತುಳಿ ಯುವ ಕಡಸಾಗಿದೆ; ತುಳಿಯುವದನ್ನು ಪ್ರೀತಿಮಾಡು ತ್ತದೆ; ಆದರೆ ನಾನು ಅದರ ಸೌಂದರ್ಯದ ಕುತ್ತಿಗೆಯ ಮೇಲೆ ದಾಟಿಹೋದೆನು. ಎಫ್ರಾಯಾಮು ಸವಾರಿಮಾಡುವ ಹಾಗೆ ನಾನು ಮಾಡುವೆನು; ಯೆಹೂದ ಉಳುವನು, ಯಾಕೋಬನು ಅವನ ಹೆಂಟೆಗಳನ್ನು ಒಡೆಯುವನು.

12ನಿಮಗಾಗಿ ನೀತಿಯಲ್ಲಿ ಬಿತ್ತಿರಿ, ಕರುಣೆಯಲ್ಲಿ ಕೊಯ್ಯಿರಿ; ಹಾಳಾಗಿ ಬೀಳುಬಿದ್ದ ನಿಮ್ಮ ಭೂಮಿಯನ್ನು ಅಗೆಯಿರಿ; ಆತನು ಬಂದು ನಿಮ್ಮ ಮೇಲೆ ನೀತಿಯನ್ನು ಸುರಿಸುವ ವರೆಗೂ ಕರ್ತನನ್ನು ಹುಡುಕುವ ಸಮಯ ಇದೇ.

13ನೀವು ದುಷ್ಟತ್ವವನ್ನು ಬಿತ್ತು ಅನ್ಯಾಯವನ್ನು ಕೊಯ್ದಿರಿ. ಸುಳ್ಳಿನ ಫಲವನ್ನು ತಿಂದಿದ್ದೀರಿ; ನಿನ್ನ ಮಾರ್ಗದಲ್ಲಿಯೂ ನಿನ್ನ ಬಲಿಷ್ಠರಾದ ಹಲವರಲ್ಲಿಯೂ ಭರವಸೆಯಿಟ್ಟಿದ್ದೀ.

14ನಿನ್ನ ಜನರಲ್ಲಿ ಗಲಭೆ ಉಂಟಾಗುವದು; ಶಲ್ಮಾನನು ಬೇತ್‌ ಅರ್ಬೇ ಲನ್ನು ನಾಶಮಾಡಿದ ಪ್ರಕಾರ ನಿನ್ನ ಕೋಟೆಗಳೆಲ್ಲಾ ನಾಶಮಾಡಲ್ಪಡುವವು; ತಾಯಿಯು ತನ್ನ ಮಕ್ಕಳ ಮೇಲೆ ಅಪ್ಪಳಿಸಿ ಪುಡಿಪುಡಿಯಾಗಿ ಮಾಡಲ್ಪಟ್ಟಳು.

15ಹಾಗೆಯೇ ನಿಮ್ಮ ಬಹಳ ದುಷ್ಟತ್ವದ ನಿಮಿತ್ತ ಬೇತೇಲು ನಿಮಗೆ ಹೀಗೆ ಮಾಡುವದು. ಬೆಳಗಿನ ಜಾವದಲ್ಲಿ ಇಸ್ರಾಯೇಲಿನ ಅರಸನು ಸಂಪೂರ್ಣವಾಗಿ ಕಡಿಯಲ್ಪ ಡುವನು (ಹಾಳಾಗುವನು).

ಹೋಶೇ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी