೧ ಅರಸುಗಳು 18:5

ಅಹಾ ಬನು ಓಬದ್ಯನಿಗೆ--ನೀನು ದೇಶದಲ್ಲಿರುವ ಎಲ್ಲಾ ನೀರು ಬುಗ್ಗೆಗಳ ಬಳಿಗೂ ಎಲ್ಲಾ ಹಳ್ಳಗಳ ಬಳಿಗೂ ಹೋಗು. ನಾವು ಸಮಸ್ತ ಪಶುಗಳನ್ನು ಕಳಕೊಳ್ಳದ ಹಾಗೆ ಕುದುರೆಗಳನ್ನೂ ಹೇಸರ ಕತ್ತೆಗಳನ್ನೂ ಜೀವ ದಿಂದ ಇರಿಸುವದಕ್ಕೆ ನಮಗೆ ಒಂದು ವೇಳೆ ಹುಲ್ಲು ದೊರಕಬಹುದು ಅಂದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 18

3ಆಗ ಅಹಾಬನು ತನ್ನ ಮನೆಯ ಉಗ್ರಾಣಿಕನಾದ ಓಬದ್ಯನನ್ನು ಕರೆದನು. (ಓಬದ್ಯನು ಕರ್ತನಿಗೆ ಬಹಳ ಭಯಪಡುವವನಾಗಿದ್ದನು.

4ಈಜೆಬೆ ಲಳು ಕರ್ತನ ಪ್ರವಾದಿಗಳನ್ನು ಕೊಲ್ಲುವಾಗ ಓಬ ದ್ಯನು ನೂರು ಮಂದಿ ಪ್ರವಾದಿಗಳನ್ನು ತೆಗೆದುಕೊಂಡು ಐವತ್ತು ಐವತ್ತು ಮಂದಿಯಾಗಿ ಅವರನ್ನು ಗವಿಯಲ್ಲಿ ಬಚ್ಚಿಟ್ಟು ಅವರಿಗೆ ಆಹಾರವನ್ನೂ ನೀರನ್ನೂ ಕೊಟ್ಟು ಅವರನ್ನು ಸಂರಕ್ಷಣೆ ಮಾಡುತ್ತಾ ಇದ್ದನು.)

5ಅಹಾ ಬನು ಓಬದ್ಯನಿಗೆ--ನೀನು ದೇಶದಲ್ಲಿರುವ ಎಲ್ಲಾ ನೀರು ಬುಗ್ಗೆಗಳ ಬಳಿಗೂ ಎಲ್ಲಾ ಹಳ್ಳಗಳ ಬಳಿಗೂ ಹೋಗು. ನಾವು ಸಮಸ್ತ ಪಶುಗಳನ್ನು ಕಳಕೊಳ್ಳದ ಹಾಗೆ ಕುದುರೆಗಳನ್ನೂ ಹೇಸರ ಕತ್ತೆಗಳನ್ನೂ ಜೀವ ದಿಂದ ಇರಿಸುವದಕ್ಕೆ ನಮಗೆ ಒಂದು ವೇಳೆ ಹುಲ್ಲು ದೊರಕಬಹುದು ಅಂದನು.

6ಅವರು ದೇಶವನ್ನು ಹಾದು ಹೋಗಲು ಅದನ್ನು ವಿಭಾಗ ಮಾಡಿಕೊಂಡು ಅಹಾಬನು ಒಂದು ಮಾರ್ಗದಲ್ಲಿಯೂ ಓಬದ್ಯನು ಮತ್ತೊಂದು ಮಾರ್ಗದಲ್ಲಿಯೂ ಪ್ರತ್ಯೇಕ ವಾಗಿ ಹೋದರು.

7ಓಬದ್ಯನು ಮಾರ್ಗದಲ್ಲಿ ಹೋಗುತ್ತಿರುವಾಗ ಇಗೋ, ಎಲೀಯನು ಅವನನ್ನು ಸಂಧಿಸಿದನು. ಓಬದ್ಯನು ಇವನನ್ನು ಗುರುತಿಸಿ ಮೊರೆ ಕೆಳಗಾಗಿ ಬಿದ್ದು--ನೀನು ನನ್ನ ಒಡೆಯನಾದ ಎಲೀಯನಲ್ಲವೋ ಅಂದನು.

೧ ಅರಸುಗಳು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी