ಅಪೊಸ್ತಲರ ಕೃತ್ಯಗಳು 6:11

ಅವರು ಸುಳ್ಳು ಸಾಕ್ಷಿ ಹೇಳುವ ಮನುಷ್ಯರನ್ನು ಸೇರಿಸಿಕೊಂಡು--ಇವನು ಮೋಶೆಗೆ ಮತ್ತು ದೇವರಿಗೆ ವಿರೋಧವಾಗಿ ದೂಷಣೆಯ ಮಾತುಗಳನ್ನು ಹೇಳುವದನ್ನು ನಾವು ಕೇಳಿದ್ದೇವೆ ಎಂದು ಅವರು ಹೇಳಿದರು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 6

9ಆಗ ಲಿಬೆರ್ತೀನ ಎಂಬ ಸಭಾಮಂದಿರದಲ್ಲಿಯೂ ಕುರೇನ್ಯ ಅಲೆಕ್ಸಾಂದ್ರಿಯ ಕಿಲಿಕ್ಯ ಆಸ್ಯದವರ ಸಭಾಮಂದಿರ ದಲ್ಲಿಯೂ ಕೆಲವರು ಎದ್ದು ಸ್ತೆಫನನೊಂದಿಗೆ ತರ್ಕ ಮಾಡುತ್ತಿದ್ದರು.

10ಆದರೆ ಅವನು ಜ್ಞಾನದಿಂದಲೂ ಆತ್ಮನಿಂದಲೂ ಮಾತನಾಡಿದ್ದನ್ನು ಅವರು ಎದುರಿಸ ಲಾರದೆ ಹೋದರು.

11ಅವರು ಸುಳ್ಳು ಸಾಕ್ಷಿ ಹೇಳುವ ಮನುಷ್ಯರನ್ನು ಸೇರಿಸಿಕೊಂಡು--ಇವನು ಮೋಶೆಗೆ ಮತ್ತು ದೇವರಿಗೆ ವಿರೋಧವಾಗಿ ದೂಷಣೆಯ ಮಾತುಗಳನ್ನು ಹೇಳುವದನ್ನು ನಾವು ಕೇಳಿದ್ದೇವೆ ಎಂದು ಅವರು ಹೇಳಿದರು.

12ಇನ್ನೂ ಅವರು ಜನರನ್ನೂ ಹಿರಿಯರನ್ನೂ ಶಾಸ್ತ್ರಿ ಗಳನ್ನೂ ರೇಗಿಸಿದ್ದಲ್ಲದೆ ಬಂದು ಅವನನ್ನು ಹಿಡಿದು ಆಲೋಚನಾಸಭೆಗೆ ತೆಗೆದುಕೊಂಡು ಹೋಗಿ

13ಸುಳ್ಳು ಸಾಕ್ಷಿಗಳನ್ನು ನಿಲ್ಲಿಸ ಲಾಗಿ ಅವರು--ಈ ಮನುಷ್ಯನು ಈ ಪರಿಶುದ್ಧ ಸ್ಥಳಕ್ಕೂ ನ್ಯಾಯಪ್ರಮಾಣಕ್ಕೂ ವಿರುದ್ಧವಾಗಿ ದೂಷಣೆಯ ಮಾತುಗಳನ್ನಾಡುವದನ್ನು ನಿಲ್ಲಿಸುವದೇ ಇಲ್ಲ.

ಅಪೊಸ್ತಲರ ಕೃತ್ಯಗಳು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी