ಕಾರಣವಿಲ್ಲದೆ ನನಗೆ ಕೇಡು ಮಾಡಿದ ಕಾರಣ ಅಹಂಕಾರಿಗಳು ನಾಚಿಕೆಪಡಲಿ, ನಾನು ನಿನ್ನ ಕಟ್ಟಳೆಗಳನ್ನು ಧ್ಯಾನ ಮಾಡುವೆನು.
76ನಿನ್ನ ಸೇವಕನಿಗೆ ನೀನು ಹೇಳಿದ ಮಾತಿನ ಪ್ರಕಾರ ನನ್ನನ್ನು ಆದರಿಸುವದಕ್ಕೆ ನಿನ್ನ ದಯಾಪೂರ್ಣ ಕರುಣೆ ಇರಲಿ.
77ನಿನ್ನ ಅಂತಃಕರಣವು ನನಗೆ ಬರಲಿ; ಆಗ ನಾನು ಬದುಕುವೆನು; ನಿನ್ನ ನ್ಯಾಯಪ್ರಮಾಣವು ನನ್ನ ಆನಂದವಾಗಿದೆ.
78ಕಾರಣವಿಲ್ಲದೆ ನನಗೆ ಕೇಡು ಮಾಡಿದ ಕಾರಣ ಅಹಂಕಾರಿಗಳು ನಾಚಿಕೆಪಡಲಿ, ನಾನು ನಿನ್ನ ಕಟ್ಟಳೆಗಳನ್ನು ಧ್ಯಾನ ಮಾಡುವೆನು.
79ನಿನಗೆ ಭಯಪಟ್ಟು ನಿನ್ನ ಸಾಕ್ಷಿಗಳನ್ನು ಬಲ್ಲವರು ನನ್ನ ಕಡೆಗೆ ತಿರುಗಲಿ.
80ನಾನು ನಾಚಿಕೆಪಡದ ಹಾಗೆ ನನ್ನ ಹೃದಯವು ನಿನ್ನ ನಿಯಮಗಳಲ್ಲಿ ಸಂಪೂರ್ಣವಾಗಿರಲಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ