ಈ ಪಟ್ಟಣಗಳಲ್ಲಿ ಪ್ರತಿಯೊಂದಕ್ಕೂ ಅದರದರ ಸುತ್ತಲೂ ಉಪನಗರಗಳು ಇದ್ದವು; ಪಟ್ಟಣಗಳಿಗೆಲ್ಲಾ ಹೀಗೆಯೇ ಇದ್ದವು.
40ಹೀಗೆಯೇ ಲೇವಿಯರ ಕುಟುಂಬಗಳಲ್ಲಿ ಉಳಿದಂಥ ಮೆರಾರೀಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಚೀಟಿನಿಂದ ದೊರೆತ ಪಟ್ಟಣಗಳೆಲ್ಲಾ ಹನ್ನೆರಡು ಪಟ್ಟಣಗಳೂ ಅವುಗಳ ಉಪನಗರಗಳೂ.
41ಇಸ್ರಾಯೇಲ್ ಮಕ್ಕಳ ಸ್ವಾಸ್ತ್ಯದ ಮಧ್ಯದಲ್ಲಿ ಇರುವ ಲೇವಿಯರ ಎಲ್ಲಾ ಪಟ್ಟಣಗಳೂ ಅವುಗಳ ಉಪನಗರಗಳೂ ನಾಲ್ವತ್ತೆಂಟು ಪಟ್ಟಣಗಳು.
42ಈ ಪಟ್ಟಣಗಳಲ್ಲಿ ಪ್ರತಿಯೊಂದಕ್ಕೂ ಅದರದರ ಸುತ್ತಲೂ ಉಪನಗರಗಳು ಇದ್ದವು; ಪಟ್ಟಣಗಳಿಗೆಲ್ಲಾ ಹೀಗೆಯೇ ಇದ್ದವು.
43ಕರ್ತನು ಅವರ ತಂದೆಗಳಿಗೆ ಕೊಡುವೆನೆಂದು ಆಣೆ ಇಟ್ಟ ದೇಶವನ್ನೆಲ್ಲಾ ಇಸ್ರಾಯೇಲಿಗೆ ಕೊಟ್ಟನು; ಅವರು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸವಾಗಿದ್ದರು.
44ಕರ್ತನು ಅವರ ತಂದೆಗಳಿಗೆ ಆಣೆ ಇಟ್ಟ ಪ್ರಕಾರವೆಲ್ಲಾ ಅವರ ಸುತ್ತಲೂ ಅವರಿಗೆ ವಿಶ್ರಾಂತಿ ಕೊಟ್ಟನು; ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ; ಅವರ ಶತ್ರುಗಳನ್ನೆಲ್ಲಾ ಕರ್ತನು ಅವರ ಕೈಗಳಿಗೆ ಒಪ್ಪಿಸಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ