ಯೆರೆಮಿಯ 1:13

ಎರಡನೇ ಸಾರಿ ಕರ್ತನ ವಾಕ್ಯವು ನನಗೆ ಉಂಟಾಗಿ--ನೀನು ಏನು ನೋಡುತ್ತೀ ಎಂದು ಕೇಳಿದ್ದಕ್ಕೆ ನಾನು--ಬೇಯುವ ಮಡಿಕೆಯನ್ನು ನೋಡುತ್ತೇನೆ; ಅದರ ಬಾಯಿ ಉತ್ತರದ ಕಡೆಗೆ ಇದೆ ಅಂದೆನು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 1

11ಇದಲ್ಲದೆ ಕರ್ತನ ವಾಕ್ಯವು ನನಗೆ--ಯೆರೆವಿಾ ಯನೇ, ನೀನು ಏನು ನೋಡುತ್ತೀ ಎಂದು ಕೇಳಿದ್ದಕ್ಕೆ ನಾನು--ಬಾದಾಮಿ ಮರದ ಕೋಲನ್ನು ನೋಡುತ್ತೇನೆ ಅಂದೆನು.

12ಆಗ ಕರ್ತನು ನನಗೆ--ನೀನು ಚೆನ್ನಾಗಿ ನೋಡಿದ್ದೀ; ನನ್ನ ವಾಕ್ಯವನ್ನು ನೆರವೇರಿಸಲು ತ್ವರೆಪಡುವೆನು ಅಂದನು.

13ಎರಡನೇ ಸಾರಿ ಕರ್ತನ ವಾಕ್ಯವು ನನಗೆ ಉಂಟಾಗಿ--ನೀನು ಏನು ನೋಡುತ್ತೀ ಎಂದು ಕೇಳಿದ್ದಕ್ಕೆ ನಾನು--ಬೇಯುವ ಮಡಿಕೆಯನ್ನು ನೋಡುತ್ತೇನೆ; ಅದರ ಬಾಯಿ ಉತ್ತರದ ಕಡೆಗೆ ಇದೆ ಅಂದೆನು.

14ಆಗ ಕರ್ತನು ನನಗೆ--ಉತ್ತರ ಕಡೆಯಿಂದ ದೇಶದ ನಿವಾಸಿಗಳೆಲ್ಲರ ಮೇಲೆ ಕೇಡು ಹೊರಟು ಬರುವದು.

15ಇಗೋ, ನಾನು ಉತ್ತರದಲ್ಲಿರುವ ರಾಜ್ಯಗಳ ಕುಟುಂಬಗಳನ್ನೆಲ್ಲಾ ಕರೆಯುತ್ತೇನೆಂದು ಕರ್ತನು ಅನ್ನು ತ್ತಾನೆ; ಅವರು ಬಂದು ತಮ್ಮ ತಮ್ಮ ಸಿಂಹಾಸನಗಳನ್ನು ಯೆರೂಸಲೇಮಿನ ಬಾಗಿಲುಗಳ ಪ್ರವೇಶದಲ್ಲಿಯೂ ಅದರ ಸುತ್ತಲಾಗಿರುವ ಗೋಡೆಗಳಿಗೆ ಎದುರಾಗಿಯೂ ಯೆಹೂದದ ಎಲ್ಲಾ ಪಟ್ಟಣಗಳಿಗೆ ಎದುರಾಗಿಯೂ ಇರಿಸುವರು.

ಯೆರೆಮಿಯ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी