ಪ್ರಕಟನೆ 9:9

ಅವುಗಳಿಗೆ ಕಬ್ಬಿಣದ ಕವಚಗಳಂತಿದ್ದ ಕವಚಗಳು ಇದ್ದವು; ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ಅನೇಕ ರಥಾಶ್ವಗಳ ಶಬ್ದದ ಹಾಗೆ ಇತ್ತು.

ಸಂದರ್ಭದೊಂದಿಗೆ ಓದಿ · ಪ್ರಕಟನೆ 9

7ಆ ಮಿಡಿತೆಗಳ ಆಕಾರಗಳು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ಆಕಾರದಂತೆ ಇದ್ದವು ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳೋ ಎಂಬಂತೆ ಇದ್ದವು; ಅವುಗಳ ಮುಖಗಳು ಮನುಷ್ಯರ ಮುಖಗಳ ಹಾಗೆ ಇದ್ದವು.

8ಸ್ತ್ರೀಯರ ಕೂದಲಿ ನಂತಿರುವ ಕೂದಲು ಅವುಗಳಿಗೆ ಇತ್ತು; ಅವುಗಳ ಹಲ್ಲುಗಳು ಸಿಂಹದ ಹಲ್ಲುಗಳ ಹಾಗಿದ್ದವು.

9ಅವುಗಳಿಗೆ ಕಬ್ಬಿಣದ ಕವಚಗಳಂತಿದ್ದ ಕವಚಗಳು ಇದ್ದವು; ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ಅನೇಕ ರಥಾಶ್ವಗಳ ಶಬ್ದದ ಹಾಗೆ ಇತ್ತು.

10ಚೇಳಿಗಿರುವಂತೆ ಅವುಗಳಿಗೆ ಬಾಲಗಳೂ ಆ ಬಾಲಗಳಲ್ಲಿ ಕೊಂಡಿಗಳೂ ಇದ್ದವು; ಮನುಷ್ಯರನ್ನು ಐದು ತಿಂಗಳುಗಳ ವರೆಗೂ ಬಾಧಿಸುವ ಬಲವು ಅವುಗಳಿಗೆ ಇತ್ತು.

11ತಳವಿಲ್ಲದ ತಗ್ಗಿನ ದೂತನು ಅವುಗಳನ್ನಾಳುವ ಅರಸನು; ಅವನಿಗೆ ಇಬ್ರಿಯ ಭಾಷೆಯಲ್ಲಿ ಅಬದ್ದೋನನೆಂತಲೂ ಗ್ರೀಕ್‌ ಭಾಷೆಯಲ್ಲಿ ಅಪೊಲ್ಲುವೋನನೆಂತಲೂ ಹೆಸರು.

ಪ್ರಕಟನೆ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी