ಲೂಕನು 10:22

ಎಲ್ಲವುಗಳು ನನ್ನ ತಂದೆಯಿಂದ ನನಗೆ ಒಪ್ಪಿಸಲ್ಪಟ್ಟಿವೆ; ತಂದೆಯ ಹೊರತು ಯಾರೂ ಮಗನನ್ನು ಅರಿಯರು. ಮಗನೂ ತಾನು ಯಾರಿಗೆ ತಂದೆಯನ್ನು ಪ್ರಕಟಮಾಡುವನೋ ಅವನೂ ಅಲ್ಲದೆ ಆತನನ್ನು (ತಂದೆಯನ್ನು) ಯಾರೂ ಅರಿತವರಲ್ಲ.

ಸಂದರ್ಭದೊಂದಿಗೆ ಓದಿ · ಲೂಕನು 10

20ಆದಾಗ್ಯೂ ದುರಾತ್ಮಗಳು ನಿಮಗೆ ಅಧೀನವಾದವೆಂದು ಸಂತೋಷಪಡಬೇಡಿರಿ; ಆದರೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿರು ವದರಿಂದಲೇ ಸಂತೋಷಿಸಿರಿ ಅಂದನು.

21ಆ ಗಳಿಗೆಯಲ್ಲಿ ಯೇಸು ಆತ್ಮದಲ್ಲಿ ಉಲ್ಲಾಸ ಗೊಂಡು -- ಓ ತಂದೆಯೇ, ಪರಲೋಕ, ಭೂಲೋಕ ಗಳ ಒಡೆಯನೇ, ನೀನು ಈ ಸಂಗತಿಗಳನ್ನು ಜ್ಞಾನಿ ಗಳಿಗೂ ಬುದ್ಧಿವಂತರಿಗೂ ಮರೆಮಾಡಿ ಕೂಸುಗಳಿಗೆ ಪ್ರಕಟಮಾಡಿರುವದರಿಂದ ನಿನ್ನನ್ನು ಕೊಂಡಾಡುತ್ತೇನೆ; ಹೌದು, ತಂದೆಯೇ, ಅದು ನಿನ್ನ ದೃ

22ಎಲ್ಲವುಗಳು ನನ್ನ ತಂದೆಯಿಂದ ನನಗೆ ಒಪ್ಪಿಸಲ್ಪಟ್ಟಿವೆ; ತಂದೆಯ ಹೊರತು ಯಾರೂ ಮಗನನ್ನು ಅರಿಯರು. ಮಗನೂ ತಾನು ಯಾರಿಗೆ ತಂದೆಯನ್ನು ಪ್ರಕಟಮಾಡುವನೋ ಅವನೂ ಅಲ್ಲದೆ ಆತನನ್ನು (ತಂದೆಯನ್ನು) ಯಾರೂ ಅರಿತವರಲ್ಲ.

23ಆತನು ತನ್ನ ಶಿಷ್ಯರ ಕಡೆಗೆ ತಿರುಗಿಕೊಂಡು--ನೀವು ನೋಡು ತ್ತಿರುವವುಗಳನ್ನು ನೋಡುವ ಕಣ್ಣುಗಳು ಧನ್ಯವಾದವು ಗಳು ಎಂದು ಪ್ರತ್ಯೇಕವಾಗಿ ಹೇಳಿದನು.

24ಯಾಕಂದರೆ ಅನೇಕ ಪ್ರವಾದಿಗಳೂ ಅರಸರೂ ನೀವು ನೋಡು ವಂಥವುಗಳನ್ನು ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಿಲ್ಲ ಮತ್ತು ನೀವು ಕೇಳುವಂಥವುಗಳನ್ನು ಕೇಳ ಬೇಕೆಂದು ಅಪೇಕ್ಷಿಸಿದರೂ ಅವರು ಕೇಳಲಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.

ಲೂಕನು 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी