ಲೂಕನು 15:18

ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ--ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ನಾನು ಪಾಪಮಾಡಿದ್ದೇನೆ;

ಸಂದರ್ಭದೊಂದಿಗೆ ಓದಿ · ಲೂಕನು 15

16ಅವನು ಹಂದಿಗಳು ತಿನ್ನುತ್ತಿದ್ದ ಹೊಟ್ಟಿನಿಂದ ಲಾದರೂ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವದಕ್ಕೆ ಇಷ್ಟಪಟ್ಟನು. ಆದರೆ ಯಾವನೂ ಅವನಿಗೆ ಕೊಡಲಿಲ್ಲ.

17ಅವನಿಗೆ ಬುದ್ದಿ ಬಂದಾಗ ಅವನು--ನನ್ನ ತಂದೆಯ ಎಷ್ಟೋ ಕೂಲಿಯಾಳುಗಳಿಗೆ ಸಾಕಾಗಿ ಉಳಿಯುವಷ್ಟು ಆಹಾರವಿದೆಯಲ್ಲಾ! ನಾನಾದರೋ ಹಸಿವೆಯಿಂದ ಸಾಯುತ್ತಿದ್ದೇನೆ.

18ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ--ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ನಾನು ಪಾಪಮಾಡಿದ್ದೇನೆ;

19ಇನ್ನೆಂದಿಗೂ ನಾನು ನಿನ್ನ ಮಗನೆಂದು ಕರೆಯಲ್ಪಡುವದಕ್ಕೆ ಯೋಗ್ಯನಲ್ಲ; ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಅನ್ನುವೆನು ಎಂದು ಅಂದುಕೊಂಡು

20ಎದ್ದು ತನ್ನ ತಂದೆಯ ಬಳಿಗೆ ಬಂದನು. ಆದರೆ ಅವನು ಇನ್ನೂ ಬಹಳ ದೂರದಲ್ಲಿರುವಾಗಲೇ ಅವನ ತಂದೆಯು ಅವನನ್ನು ನೋಡಿ ಕನಿಕರಪಟ್ಟು ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಮುದ್ದಿಟ್ಟನು.

ಲೂಕನು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी