ದಾನಿಯೇಲನು 6:2

ಇವರ ಮೇಲೆ ಮೂವರು ದೇಶಾಧಿಪತಿಗಳನ್ನು ನೇಮಿಸುವದು ದಾರ್ಯಾವೆಷನಿಗೆ ಹಿತವೆಂದು ತೋಚಿತು. ಇದರಿಂದ ರಾಜನಿಗೆ ಯಾವ ತೊಂದರೆಯೂ ಇಲ್ಲದೆ ಲೆಕ್ಕಗಳು ಸರಿಯಾಗಿ ಒಪ್ಪಿಸಲ್ಪಡುತ್ತಿದ್ದವು. ಇವರಲ್ಲಿ ದಾನಿಯೇ ಲನು ಮೊದಲನೆಯವನಾಗಿದ್ದನು.

ಸಂದರ್ಭದೊಂದಿಗೆ ಓದಿ · ದಾನಿಯೇಲನು 6

1ದಾರ್ಯಾವೆಷನು ತನ್ನ ರಾಜ್ಯಭಾರವನ್ನು ನಿರ್ವಹಿಸುವದಕ್ಕೋಸ್ಕರ ನೂರಿಪ್ಪತ್ತು ಮಂದಿ ಪ್ರಧಾನರನ್ನು ಆಯಾ ರಾಜ್ಯದ ಆಯಾ ಭಾಗ ಗಳ ಮೇಲೆ ಅಧಿಕಾರಿಗಳನ್ನು ಇರಿಸಿದನು.

2ಇವರ ಮೇಲೆ ಮೂವರು ದೇಶಾಧಿಪತಿಗಳನ್ನು ನೇಮಿಸುವದು ದಾರ್ಯಾವೆಷನಿಗೆ ಹಿತವೆಂದು ತೋಚಿತು. ಇದರಿಂದ ರಾಜನಿಗೆ ಯಾವ ತೊಂದರೆಯೂ ಇಲ್ಲದೆ ಲೆಕ್ಕಗಳು ಸರಿಯಾಗಿ ಒಪ್ಪಿಸಲ್ಪಡುತ್ತಿದ್ದವು. ಇವರಲ್ಲಿ ದಾನಿಯೇ ಲನು ಮೊದಲನೆಯವನಾಗಿದ್ದನು.

3ಆಗ ಈ ದಾನಿ ಯೇಲನಲ್ಲಿ ಉತ್ತಮ ಆತ್ಮವು ಇರುವದರಿಂದ ಅವನು ಪ್ರಧಾನರಿಗಿಂತಲೂ ದೇಶಾಧಿಪತಿಗಿಂತಲೂ ಶ್ರೇಷ್ಠನಾ ಗಿದ್ದನು. ಅರಸನು ಅವನನ್ನು ಸಮಸ್ತ ರಾಜ್ಯದ ಮೇಲೆ ಅಧಿಕಾರಿಯನ್ನಾಗಿ ನೇಮಿಸಲು ಮನಸ್ಸುಳ್ಳವನಾಗಿದ್ದನು.

4ಹೀಗಿರಲು ಪ್ರಧಾನಿಗಳೂ ದೇಶಾಧಿಪತಿಗಳೂ ರಾಜ್ಯ ಭಾರದ ವಿಷಯವಾಗಿ ದಾನಿಯೇಲನ ವಿರೋಧವಾಗಿ ತಪ್ಪುಹೊರಿಸುವದಕ್ಕೆ ಸಂದರ್ಭ ಹುಡುಕುತ್ತಿದ್ದರು. ಆದರೆ ಅವನು ನಂಬಿಗಸ್ತನಾಗಿದ್ದು ಅವನಲ್ಲಿ ತಪ್ಪು ದೋಷವು ಇಲ್ಲದಿದ್ದದ್ದರಿಂದ ಅವರಿಗೆ ಯಾವ ತಪ್ಪೂ ಸಿಗಲಾರದೆ ಹೋಯಿತು.

ದಾನಿಯೇಲನು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी