ಸಮಾರ್ಯವಾದರೋ ಅದರ ಅರಸನು ನೀರಿನ ಮೇಲೆ ನೊರೆಯ ಹಾಗೆ ಅಳಿದು ಹೋಗುವನು;
5ಬೇತಾವೆನಿನ ಕರುಗಳ ನಿಮಿತ್ತ ಸಮಾರ್ಯದ ನಿವಾಸಿಗಳು ಭಯಪಡುವರು; ಅದರ ಮಹಿಮೆಯು ಅವರಿಂದ ಕಳೆದುಹೋದ ಕಾರಣ ಅಂದು ಅದರ ವಿಷಯದಲ್ಲಿ ಸಂತೋಷಪಟ್ಟ ಜನರೂ ಪೂಜಾರಿಗಳೂ ಗೋಳಾಡುವರು.
6ಅದು ಸಹ ಅರಸ ನಾದ ಯಾರೇಬನಿಗೆ ಕಾಣಿಕೆಯಾಗಿ ಅಶ್ಯೂರಿಗೆ ಒಯ್ಯ ಲ್ಪಡುವದು; ಎಫ್ರಾಯಾಮು ನಾಚಿಕೆಯನ್ನು ಹೊಂದು ವದು; ಇಸ್ರಾಯೇಲ್ ಸಹ ತನ್ನ ಆಲೋಚನೆಗೆ ಅಸಹ್ಯ ಪಡುವದು.
7ಸಮಾರ್ಯವಾದರೋ ಅದರ ಅರಸನು ನೀರಿನ ಮೇಲೆ ನೊರೆಯ ಹಾಗೆ ಅಳಿದು ಹೋಗುವನು;
8ಇಸ್ರಾಯೇಲಿನ ಪಾಪವಾದ ಅವೇ ನಿನ ಉನ್ನತವಾದ ಸ್ಥಳಗಳು ಹಾಳಾಗಿಹೋಗುವವು. ಮುಳ್ಳುಗಿಡಗಳೂ ಕಳೆಗಳೂ ಬಲಿಪೀಠಗಳ ಮೇಲೆ ಬೆಳೆಯುವವು; ಅವರು ಬೆಟ್ಟಗಳಿಗೆ--ನಮ್ಮನ್ನು ಮುಚ್ಚಿರಿ, ಗುಡ್ಡಗಳೇ ನಮ್ಮ ಮೇಲೆ ಬೀಳಿರಿ ಅನ್ನುವರು.
9ಓ ಇಸ್ರಾಯೇಲೇ, ನೀನು ಗಿಬ್ಯದ ದಿನಗಳ ಮೊದ ಲಿನಿಂದ ಪಾಪ ಮಾಡಿದ್ದೀ; ಅವರು ಅಲ್ಲೇ ನಿಂತು ಕೊಂಡರು. ಅನ್ಯಾಯದ ಮಕ್ಕಳಿಗೆ ವಿರೋಧವಾದ ಯುದ್ಧವು ಗಿಬ್ಯದಲ್ಲಿ ಅವರನ್ನು ಮುಟ್ಟಲಿಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ