ಪ್ರಸಂಗಿ 1:14

ಸೂರ್ಯನ ಕೆಳಗೆ ನಡೆಯುವ ಎಲ್ಲಾ ಕೆಲಸಗಳನ್ನು ನಾನು ನೋಡಿದ್ದೇನೆ; ಇಗೋ, ಎಲ್ಲವು ವ್ಯರ್ಥವೂ ಮನಸ್ಸಿಗೆ ಆಯಾಸವೂ ಆಗಿವೆ.

ಸಂದರ್ಭದೊಂದಿಗೆ ಓದಿ · ಪ್ರಸಂಗಿ 1

12ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲ್ಯರ ಮೇಲೆ ಅರಸನಾಗಿದ್ದೆನು.

13ಆಕಾಶದ ಕೆಳಗೆ ನಡೆಯುವ ಎಲ್ಲವುಗಳ ವಿಷಯವಾಗಿ ಜ್ಞಾನ ದಿಂದ ವಿಚಾರಿಸಿ ವಿಮರ್ಶಿಸುವದಕ್ಕೆ ನಾನು ನನ್ನ ಮನಸ್ಸು ಇಟ್ಟೆನು; ಇದರ ವಿಷಯವಾದ ಪ್ರಯಾಸವು ಮನಸ್ಸಿನಲ್ಲಿ ಯೋಚಿಸುವಂತೆ ದೇವರು ಮನುಷ್ಯ ಮಕ್ಕಳಿಗೆ ಈ ಕಷ್ಟಕರವಾದ ಪ್ರಯಾಸವನ್ನು ಕೊಟ್ಟಿ ದ್ದಾನೆ.

14ಸೂರ್ಯನ ಕೆಳಗೆ ನಡೆಯುವ ಎಲ್ಲಾ ಕೆಲಸಗಳನ್ನು ನಾನು ನೋಡಿದ್ದೇನೆ; ಇಗೋ, ಎಲ್ಲವು ವ್ಯರ್ಥವೂ ಮನಸ್ಸಿಗೆ ಆಯಾಸವೂ ಆಗಿವೆ.

15ವಕ್ರ ವಾದದ್ದು ಸರಿಮಾಡುವದಕ್ಕೆ ಆಗುವದಿಲ್ಲ; ಇಲ್ಲದ್ದನ್ನು ಲೆಕ್ಕಿಸುವದು ಅಸಾಧ್ಯ.

16ನಾನು ನನ್ನ ಮನಸ್ಸಿನಲ್ಲಿ ಯೋಚಿಸುತ್ತಾ--ಇಗೋ, ನಾನು ದೊಡ್ಡ ಸ್ಥಾನಕ್ಕೆ ಬಂದಿದ್ದೇನೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದವರೆಲ್ಲರಿಗಿಂತ ನಾನು ಜ್ಞಾನವನ್ನು ಸಂಪಾದಿಸಿದ್ದೇನೆ. ಹೌದು, ಜ್ಞಾನದ ತಿಳುವಳಿಕೆಯ ದೊಡ್ಡ ಅನುಭವವು ನನ್ನ ಹೃದಯಕ್ಕೆ ಆಯಿತು ಎಂದು ಹೇಳಿದೆನು.

ಪ್ರಸಂಗಿ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी