ಪ್ರಸಂಗಿ 5:12

ಪ್ರಯಾಸಪಡುವವನು ಸ್ವಲ್ಪ ತಿಂದರೂ ಹೆಚ್ಚಾಗಿ ತಿಂದರೂ ಅವನು ಹಾಯಾಗಿ ನಿದ್ರಿಸುತ್ತಾನೆ; ಐಶ್ವರ್ಯವಂತನ ಸಮೃದ್ಧಿಯು ಅವನನ್ನು ನಿದ್ರೆಮಾಡಗೊಡಿಸದು.

ಸಂದರ್ಭದೊಂದಿಗೆ ಓದಿ · ಪ್ರಸಂಗಿ 5

10ಬೆಳ್ಳಿಯನ್ನು ಪ್ರೀತಿಸುವವನು ಬೆಳ್ಳಿಯಿಂದ ತೃಪ್ತ ನಾಗನು; ಸಮೃದ್ಧಿಯನ್ನು ಪ್ರೀತಿಸುವವನು ಅಭಿವೃದ್ಧಿ ಯಿಂದ ತೃಪ್ತನಾಗಲಾರನು; ಇದೂ ಕೂಡ ವ್ಯರ್ಥವೇ.

11ಸೊತ್ತುಗಳು ಹೆಚ್ಚಿದರೆ ಅದನ್ನು ತಿನ್ನುವವರು ಹೆಚ್ಚಾ ಗುವರು; ಅವುಗಳನ್ನು ತಮ್ಮ ಕಣ್ಣುಗಳಿಂದ ನೋಡು ವದೇ ಹೊರತು ಅವುಗಳ ಸ್ವಂತದವರಿಗೆ ಯಾವ ಪ್ರಯೋಜನವಿದೆ?

12ಪ್ರಯಾಸಪಡುವವನು ಸ್ವಲ್ಪ ತಿಂದರೂ ಹೆಚ್ಚಾಗಿ ತಿಂದರೂ ಅವನು ಹಾಯಾಗಿ ನಿದ್ರಿಸುತ್ತಾನೆ; ಐಶ್ವರ್ಯವಂತನ ಸಮೃದ್ಧಿಯು ಅವನನ್ನು ನಿದ್ರೆಮಾಡಗೊಡಿಸದು.

13ಸೂರ್ಯನ ಕೆಳಗೆ ವ್ಯಥೆಯಿಂದ ಕೂಡಿದ ಒಂದು ಕೆಟ್ಟತನವನ್ನು ನಾನು ನೋಡಿದ್ದೇನೆ; ಅದು ಯಾವ ದಂದರೆ, ತಮ್ಮ ವ್ಯಥೆಗಾಗಿ ಅವುಗಳ ಯಜ ಮಾನರು ಇಟ್ಟುಕೊಂಡಿದ್ದ ಐಶ್ವರ್ಯವೇ.

14ಆದರೆ ಕೆಟ್ಟ ಪ್ರಯಾ ಸದಿಂದ ಆ ಆಸ್ತಿಯು ನಾಶವಾಗುತ್ತದೆ; ಅವನು ಒಬ್ಬ ಮಗನನ್ನು ಪಡೆದಿದ್ದರೆ ಅವನ ಕೈಯಲ್ಲಿ ಏನೂ ಇರದು.

ಪ್ರಸಂಗಿ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी