೧ ಸಮುವೇಲನು 15:14

ಆಗ ಸಮುವೇಲನು ಅವನಿಗೆ--ನನ್ನ ಕಿವಿಗಳಲ್ಲಿ ಬೀಳುವ ಆ ಕುರಿಗಳ ಶಬ್ದವೇನು? ನಾನು ಕೇಳುವ ಪಶುಗಳ ಶಬ್ದವೇನು ಅಂದನು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 15

12ಆದರೆ ಸಮುವೇಲನು ಉದಯಕಾಲದಲ್ಲೆದ್ದು ಸೌಲನನ್ನು ಎದುರುಗೊಳ್ಳಲು ಹೋದನು. ಆಗ ಸೌಲನು ಕರ್ಮೆಲಿಗೆ ಬಂದು, ಇಗೋ, ತನಗಾಗಿ ಒಂದು ಸ್ಥಳವನ್ನು ಪ್ರತ್ಯೇಕಿಸಿದನೆಂದೂ ಅಲ್ಲಿಂದ ಸುತ್ತಿಕೊಂಡು ದಾಟಿ ಗಿಲ್ಗಾಲಿಗೆ ಹೋದನೆಂದೂ ಸಮುವೇಲನಿಗೆ ತಿಳಿಸಲ್ಪಟ್ಟಿತು.

13ಸಮುವೇಲನು ಸೌಲನ ಬಳಿಗೆ ಬಂದಾಗ ಸೌಲನು ಅವನಿಗೆ--ನಿನಗೆ ಕರ್ತನ ಆಶೀರ್ವಾದವಾಗಲಿ; ನಾನು ಕರ್ತನ ಆಜ್ಞೆಯನ್ನು ಈಡೇರಿಸಿದೆನು ಅಂದನು.

14ಆಗ ಸಮುವೇಲನು ಅವನಿಗೆ--ನನ್ನ ಕಿವಿಗಳಲ್ಲಿ ಬೀಳುವ ಆ ಕುರಿಗಳ ಶಬ್ದವೇನು? ನಾನು ಕೇಳುವ ಪಶುಗಳ ಶಬ್ದವೇನು ಅಂದನು.

15ಅದಕ್ಕೆ ಸೌಲನು--ಜನರು ಅಮಾಲೇಕ್ಯರ ಬಳಿಯಿಂದ ತಕ್ಕೊಂಡು ಬಂದವುಗಳು; ನಿನ್ನ ದೇವ ರಾದ ಕರ್ತನಿಗೆ ಬಲಿಯನ್ನು ಅರ್ಪಿಸುವದಕ್ಕೋಸ್ಕರ ಮೇಲ್ತರವಾದ ಪಶು ಕುರಿಗಳನ್ನು ಉಳಿಸಿಟ್ಟು ಮಿಕ್ಕಾದ ವುಗಳನ್ನೆಲ್ಲಾ ಸಂಪೂರ್ಣ ನಾಶಮಾಡಿಬಿಟ್ಟೆವು ಅಂದನು.

16ಆಗ ಸಮುವೇಲನು ಸೌಲನಿಗೆಅದಿರಲಿ ಕರ್ತನು ಈ ರಾತ್ರಿಯಲ್ಲಿ ನನಗೆ ಹೇಳಿದ್ದನ್ನು ನಿನಗೆ ತಿಳಿಸುವೆನು ಅಂದನು. ಅದಕ್ಕವನು--ಹೇಳು ಅಂದನು.

೧ ಸಮುವೇಲನು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी