ಪ್ರಕಟನೆ 22:8

ಯೋಹಾನನೆಂಬ ನಾನೇ ಈ ಸಂಗತಿಗಳನ್ನು ಕೇಳಿ ಕಂಡವನು. ನಾನು ಕೇಳಿ ಕಂಡಾಗ ಈ ವಿಷಯಗಳನು ನನಗೆ ತೋರಿಸಿದ ದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು.

ಸಂದರ್ಭದೊಂದಿಗೆ ಓದಿ · ಪ್ರಕಟನೆ 22

6ಆಮೇಲೆ ಅವನು ನನಗೆ--ಈ ಮಾತುಗಳು ನಂಬತಕ್ಕದ್ದೂ ಸತ್ಯವಾದದ್ದೂ ಆಗಿವೆ; ಪರಿಶುದ್ಧ ಪ್ರವಾದಿಗಳ ದೇವರಾದ ಕರ್ತನು ಬೇಗನೆ ಸಂಭವಿಸ ತಕ್ಕವುಗಳನ್ನು ತನ್ನ ಸೇವಕರಿಗೆ ತೋರಿಸುವದಕ್ಕಾಗಿ ತನ್ನ ದೂತನನ್ನು ಕಳುಹಿಸಿದನು.

7ಇಗೋ, ನಾನು ಬೇಗನೆ ಬರುತ್ತೇನೆ. ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನೆಗಳನ್ನು ಕಾಪಾಡುವವನು ಧನ್ಯನು ಎಂದು ಹೇಳಿದನು.

8ಯೋಹಾನನೆಂಬ ನಾನೇ ಈ ಸಂಗತಿಗಳನ್ನು ಕೇಳಿ ಕಂಡವನು. ನಾನು ಕೇಳಿ ಕಂಡಾಗ ಈ ವಿಷಯಗಳನು ನನಗೆ ತೋರಿಸಿದ ದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು.

9ಆಗ ಅವನು ನನಗೆ--ಇದನ್ನು ಮಾಡಬೇಡ ನೋಡು; ಯಾಕಂದರೆ ನಾನು ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ ಈ ಪುಸ್ತಕ ದಲ್ಲಿ ಹೇಳಿರುವವುಗಳನ್ನು ಕೈಕೊಂಡು ನಡೆಯುವವ ರಿಗೂ ಜೊತೆಯ ಸೇವಕನಾಗಿದ್ದೇನೆ; ದೇವರನ್ನು ಆರಾಧಿಸು ಎಂದು ನನಗೆ ಹೇಳಿದನು.

10ಇದಲ್ಲದೆ ಅವನು ನನಗೆ--ಈ ಪುಸ್ತಕದಲ್ಲಿರುವ ಪ್ರವಾದನೆಯ ಹೇಳಿಕೆಗಳಿಗೆ ಮುದ್ರೆಹಾಕಬೇಡ; ಯಾಕಂದರೆ ಸಮಯವು ಸವಿಾಪವಾಗಿದೆ.

ಪ್ರಕಟನೆ 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी